ಶ್ರೀನಿವಾಸಪುರ  : ನಿರ್ಮಲ ಭಕ್ತಿಯಿಂದ ಮಾತ್ರ ಪರಮಾತ್ಮನ ಕೃಪೆಗೆ ಪಾತ್ರವಾಗಬಹುದು . ಆದರೆ ಭಕ್ತಿ ಪರಿಶುದ್ದವಾಗಿರಬೇಕು ಅಷ್ಟೆ. ದೇವರು ಮತ್ತೇನನ್ನೂ ಕೇಳುವುದಿಲ್ಲ ಎಂದು ರಾಯಲ್ಪಾಡಿನ ಮೇಧಾ ಗುರು ಜ್ಯೋತಿರ್ವಿಜ್ಞಾನ ಕೇಂದ್ರದ ಸಂಸ್ಥಾಪಕ ವೆಲ್ಲಾಲ ಸತ್ಯನಾರಾಯಣಶಾಸ್ತ್ರಿ  ಹೇಳಿದರು.ಶುಕ್ರವಾರ ಬಯ್ಯಪಲ್ಲಿ ಗ್ರಾಮದಲ್ಲಿನ ಗ್ರಾಮದೇವತೆಯವರಾದ ಗಂಗಮ್ಮ,ಪುಲೇಕಮ್ಮ ದೇವರ ಮಂಡಲಪೂಜಾ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.photo --1

ಸ್ಥಿರ ಚಿತ್ತದಿಂದ ಐಹಿಕತ್ವವನ್ನು ಮರೆತು ಮೌನಯೋಗದಿಂದ ಭವಬಂದಗಳನ್ನು ದೂರಕ್ಕೆ ತಳ್ಳಿ ಪರಮಾತ್ಮನನ್ನು ನೆನೆಯುತ್ತಾ ಸ್ವಲ್ಪ ಸಮಯ ದೇವಸ್ಥಾನದಲ್ಲಿ ಕುಳಿತು ಬರುವುದರಿಂದ ಮನಸ್ಸಿಗೆ ಸ್ವಸ್ಥತೆ ಬರುತ್ತದೆ. ದೇಹಕ್ಕೆ ಶಕ್ತಿ ಸಿಗುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ . ಯೋಚನೆಗಳೆಲ್ಲವೂ ಸಕ್ರಮವಾಗುತ್ತದೆ. ದೇವರನ್ನು ಪರಿಶುದ್ದವಾದ ಭಕ್ತಿಯಿಂದ ಗೆಲ್ಲಬೇಕು . ಭಕ್ತಿಗೆ ಎಲ್ಲಕಿಂತ ಮಿಗಿಲಾದ ಶಕ್ತಿ ಇದೆ. ಎಲ್ಲರನ್ನೂ ನಿಗ್ರಹಿಸುವ ಒಂದು ಶಕಿ ಇದ್ದು, ಅದನ್ನೇ ನಾವು ಪರಮಾತ್ಮ ಎನ್ನುತ್ತೇವೆ. ಆತನ ಸೇವೆ ಮಾಡಿದವರು ಎಂದೂ ಕೆಟ್ಟಿಲ್ಲ . ಸ್ವಾಮಿಯ ಸೇವೆಯ ಅವಕಾಶ ಸಿಕ್ಕಿರುವ ನಾವೇ ಧನ್ಯರು . ದಿನ ನಿತ್ಯದ ಒತ್ತಡದಿಂದ ಮನುಷ್ಯ ನೆಮ್ಮದಿ ಕಳೆದುಕೊಳ್ಳುತ್ತಿದ್ದು , ಮನಸ್ಸಿನ ಶಾಂತಿಗಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅರ್ಚಕರ ಹಾಗು ಪುರೋಹಿತರ ಸಂಘದ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ವಿಕ್ರಮ್, ಪುರೋಹಿತ ಸುಬ್ರಮಣ್ಯರವರು ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ದೇವರ ದರ್ಶನ ಪಡೆದರು.

By suddi9

Leave a Reply

Your email address will not be published. Required fields are marked *