ಬಂಟ್ವಾಳ: ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವೂಫ್ ಶರೀಫ್ ಅವರನ್ನು ಇಡಿ ಬಂಧಿಸಿದ್ದರ ವಿರುದ್ಧ ಸಿ ಎಫ್ ಐ ಬಂಟ್ವಾಳ ಜಿಲ್ಲಾ ಸಮಿತಿ ವತಿಯಿಂದ ಬಿ.ಸಿ.ರೋಡಿನ ಕೈಕಂಬ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಪಿಜೆ ‘ರವೂಫ್ ಷರೀಫ್ ಬಂಧನವು ಎನ್.ಆರ್.ಸಿ ಸಿಎಎ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹೋರಾಟಗಾರರ ಬಂಧನದ ಮುಂದವರಿದ ಭಾಗವಾಗಿದೆ ಎಂದು ದೂರಿದರು.

ರಾಜ್ಯ ಸಮಿತಿ ಸದಸ್ಯರಾದ ರಿಯಾಜ್ ಕಡಂಬು ಮಾತನಾಡಿ ಶೀಘ್ರ ಬಿಡುಗಡೆಗೊಳಿಸಬೇಕು ಇಲ್ಲದಿದ್ದಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಕ್ಯಾಂಪಸ್ ಫ್ರಂಟ್ ಬಂಟ್ವಾಳ ಜಿಲ್ಲಾಧ್ಯಕ್ಷ ಫಹದ್ ಅನ್ವರ್, ಕಾರ್ಯದರ್ಶಿ ಸಾಬಿತ್ ಬಂಟ್ವಾಳ, ಸಮಿತಿ ಸದಸ್ಯರಾದ ಸಫ್ವಾನ್, ಐಮಾನ್, ಹಮೀದ್, ಸಜ್ಜಾದ್, ನಿಯಾಜ್ ಮತ್ತಿತರರು ಉಪಸ್ಥಿತರಿದ್ದರು. ಅಶ್ಪಾಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
