ಬಂಟ್ವಾಳ:  ಬಂಟ್ವಾಳ ತಾಲೂಕಿನ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸ್ಕಿಡ್ ಆಗಿ ವಿಟ್ಲದ ಜನಪ್ರಿಯ ಬಾಣಸಿಗರಾದ ಕಾಂತಡ್ಕ ಶಂಕರನಾರಾಯಣ ಭಟ್ (58) ಸಾವನ್ನಪ್ಪಿದ್ದಾರೆ.Shankaranarayana Bhat

ಮಂಗಳೂರು ಕಡೆಯಿಂದ ಬೈಕಿನಲ್ಲಿ ವಿಟ್ಲ ಕಡೆಗೆ ಆಗಮಿಸುತ್ತಿದ್ದ ಅವರ ಬೈಕ್ ಫರಂಗಿಪೇಟೆಯ ಮೀನು ಮಾರುಕಟ್ಟೆ ಬಳಿ ಪಲ್ಟಿಯಾಗಿ ಅಪಘಾತ ಸಂಭವಿಸಿದ್ದಾಗಿ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗೆ ಅವರು ಅಸು ನೀಗಿದರು. ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅವರು ಹೊಂದಿದ್ದರು. ವಿಟ್ಲ ಪರಿಸರದ ಪ್ರಖ್ಯಾತ ಬಾಣಸಿಗರಾಗಿದ್ದ ಅವರು, ಹಲವಾರು ದೇವಸ್ಥಾನಗಳ ದೊಡ್ಡ ಪ್ರಮಾಣದ ಅಡುಗೆಯನ್ನು ಮಾಡುವುದರಲ್ಲಿ ನಿಷ್ಣಾತರಾಗಿದ್ದರು. ವಿಟ್ಲ ಸಮೀಪ ನೆತ್ತರಕೆರೆ ಎಂಬಲ್ಲಿನ ಪಾಂಚಜನ್ಯ ಲೇಔಟ್ ನಲ್ಲಿ ವಾಸವಾಗಿದ್ದರು.

By suddi9

Leave a Reply

Your email address will not be published. Required fields are marked *