ಬಂಟ್ವಾಳ: ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯನ್ನು ಆಚರಿಸಲಾಯಿತು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ನಸೀಮಾ ಬೇಗಂ ಎಸ್,    ಸಂವಿಧಾನದ ಮಹತ್ವ ವಿವರಿಸಿ ಅಂಬೇಡ್ಕರ್ ಜೀವನದ ಮಾಹಿತಿ, ಸಮಾನತೆಯ ಆಧಾರದಲ್ಲಿ ಸಮಾಜ ಕಟ್ಟುವ ಉದ್ದೇಶದಿಂದ ಸಂವಿಧಾನದಲ್ಲಿ ಹಲವಾರು ಅವಕಾಶಗಳನ್ನು ಸೃಷ್ಟಿಸಿ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಪುಷ್ಟಿ ನೀಡಿದರ ಬಗೆಯನ್ನು ವಿವರಿಸಿದರಲ್ಲದೆ ಸಂವಿಧಾನದ ಶಿಲ್ಪಿಗಳ ಉದ್ದೇಶವನ್ನು ಈಡೇರಿಸುವಂತೆ ಕರೆ ನೀಡಿದರು.IMG20201207112618

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ  ಸೌಮ್ಯ ಹೆಚ್.ಕೆ ಇವರು ಸಂವಿಧಾನದ ಮಹತ್ವವನ್ನು ವಿವರಿಸಿ, ಉತ್ತಮ ಆಶಯಗಳನ್ನೊಳಗೊಂಡ ದೀರ್ಘವಾದ ಸಂವಿಧಾನವಾಗಿದ್ದು, ನಮಗೆ ಬೇಕೆನಿಸಿದಂತೆ ಸಂವಿಧಾನವನ್ನು ತಿರುಚದೆ ಸಂವಿಧಾನ ಶಿಲ್ಪಿಗಳ ಮೂಲ ಉದ್ದೇಶವನ್ನು ಈಡೇರುವಂತೆ ಮತ್ತು ಅವರ ಚಿಂತನೆ, ಮೌಲ್ಯಗಳಿಗೆ ಪ್ರಾಧಾನ್ಯತೆ ನೀಡಿ ಸಂವಿಧಾನವನ್ನು ಉಳಿಸಿ,ಬೆಳೆಸುವಂತೆ  ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಗಾಯತ್ರಿ ಮತ್ತು ಇಂದ್ರಾವತಿ ಪ್ರಾರ್ಥಿಸಿದರು. ಪೂಜಾ ಸ್ವಾಗತಿಸಿ ಅಶ್ವಿತ  ವಂದಿಸಿದರು. ಶಮೀಮ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *