ಬಂಟ್ವಾಳ:ಬಿ.ಎ ಹಳೆ ವಿದ್ಯಾರ್ಥಿಗಳ ಸಂಘ ತುಂಬೆ ಇವರ ಆಶ್ರಯದಲ್ಲಿ ದಿ.ಡಾ.ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಸ್ಮರಣಾರ್ಥ ಆಹ್ವಾನಿತ 6 ತಂಡಗಳ ಬಂಟ್ವಾಳ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಶನಿವಾರ ರಾತ್ರಿ ತುಂಬೆ ಬಿ.ಎ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಬಿ.ಎ ಗ್ರೂಪ್ ನ ಆಡಳಿತ ನಿರ್ದೇಶಕರಾದ  ಬಿ.ಅಬ್ದುಲ್ ಸಲಾಂ ಮಾತನಾಡಿ ದಿವಂಗತರಾದ   ತಂದೆಯವರ ಸ್ಮರಣಾರ್ಥ  ತುಂಬೆ ಕಾಲೇಜಿನ ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡ ಈ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ಕ್ರೀಡಾ ಪಟುಗಳು ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಉತ್ತಮ ಪ್ರದರ್ಶನ ನೀಡಬೇಕೆಂದು ಶುಭಹಾರೈಸಿದರು.IMG-20201206-WA0024

ವೇದಿಕೆಯಲ್ಲಿ ಬಿ..ಅಬ್ದುಲ್ ಕಬೀರ್, ಬಿ.ಜಗದೀಶ್ ರೈ, ಸುದೀರ್ ಕೊಪ್ಪಳ ಉಪಸ್ಥಿತರಿದ್ದರು.ಶ್ರೀಕಾಂತ್ ಶೆಟ್ಟಿ,ಮೊಹಮ್ಮದ್ ವಳವೂರು,ಪ್ರವೀಣ್ ತುಂಬೆ,ಮೊಹಮ್ಮದ್ ಶರೀಫ್,ಲುಕ್ಮಾನ್,ಗಣೇಶ ಸುವರ್ಣ,ಬೇಬಿ ಕುಂದರ್, ಸೋಮಪ್ಪ ಕೋಟ್ಯಾನ್, ಝಹೂರ್ ತುಂಬೆ,ಇಮ್ತಿಯಾಜ್ ಅಲ್ಫಾ,ಮೊಹಮ್ಮದ್ ಇರ್ಫಾನ್,ಹ್ಯೂಬರ್ಟ್ ಮೇರಮಜಲು, ಮೊಹಮ್ಮದ್ ಬೊಳ್ಳಾಯಿ,ಅಯ್ಯೂಬ್ ಫರಂಗಿಪೇಟೆ,ಶಬೀರ್ ಕೆಂಪಿ ಪಂದ್ಯಾಟಕ್ಕೆ ಆಗಮಿಸಿ ಶುಭ ಹಾರೈಸಿದರು.ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಜಗದೀಶ್ ರೈ,ಸುಪ್ರೀತ್ ಆಳ್ವ,ಇಸಾಕ್ ನಂದಾವರ ಇವರನ್ನು ಗೌರವಿಸಲಾಯಿತು. ಆರೀಫ್ ತಲಪಾಡಿ,ಆರೀಫ್ ಪರ್ಲಿಯಾ,ಅನೀಶ್,ಜಾಹೀರ್,ಶೌಕತ್ ಆಲಿ ರಾಮಲ್ ಕಟ್ಟೆ,ಮುಹಿಶಿನ್,ಜಿಯಾ ಬೊಳ್ಳಾಯಿ ಸಹಕರಿಸಿದರು. ಸಾಯಿರಾಮ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು,ಮಜೀದ್ ಪರ್ಲಿಯಾ ಪ್ರಸ್ತಾವನೆಗೈದರು,ಶೌಕತ್ ನಂದಾವರ ಸ್ವಾಗತಿಸಿದರು,ಶಾಹೀದ್ ತುಂಬೆ ವಂದಿಸಿದರು.

By suddi9

Leave a Reply

Your email address will not be published. Required fields are marked *