ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಕೇಸರಿ ಯುವಕ ಮಂಡಲದ ಆಶ್ರಯದಲ್ಲಿ ಯಕ್ಷಗಾನ ನೃತ್ಯ ತರಬೇತಿ ಕೇಂದ್ರವನ್ನು ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅವರು ಗುರುವಾರ ಉದ್ಘಾಟಿಸಿದರು.IMG-20201204-WA0037

ಬಳಿಕ  ಮಾತಾಡಿದ ಅವರು,  ಕಲಿಕಾ ಆಸಕ್ತರು ಶ್ರದ್ದೆ ಹಾಗೂ ಶಿಸ್ತಿನಿಂದ ಕಲಿಯುವಂತ ವಾತಾವರಣ ಸೃಷ್ಠಿ ಮಾಡಬೇಕು ಪ್ರೇರಣೆ ನೀಡುವ ಸಮರ್ಥ ಗುರುವಿನಿಂದ ಕಲಿಯಬೇಕು, ಕಲಿಯುವವ ಮೊದಲು ಉತ್ತಮ ಪ್ರೇಕ್ಷಕನಾದರೆ ಅವನೇ ಉತ್ತಮಕಲಾವಿದ ನಾಗುತ್ತಾನೆ ಎಂದು ಹೇಳಿದರು.

ಯುವಕ ಮಂಡಲದ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಪಡ್ಡಾಯಿ ಮಜಲು, ಮಣಿನಾಲ್ಕೂರು ಸೇವಾ ಸಹಕಾರಿ ಸಂಘದಿಂದ ನಿರ್ದೇಶಕ ವಿಶ್ವನಾಥ ಪೂಜಾರಿ ಬೆಂಗತ್ಯಾರು, ಬಿ.ಜೆ.ಪಿ ನಾಯಕ ಆನಂದ ಶೆಟ್ಟಿ ಬಾಚಕೆರೆ, ರಾಜೇಂದ್ರ ಪೂಜಾರಿ ಕಡಮಜೆ, ಕಿಶೋರ್ ಕುಮಾರ್  ಹಠಡಡ್ಕ ಮತ್ತು ತರಬೇತುದಾರ ಶಶಿಧರ ಬಾಚಕೆರೆ ಉಪಸ್ಥಿತರಿದ್ದರು. ಪುರುಷೋತ್ತಮ ಪೂಜಾರಿ ಮಜಲು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *