ಬಂಟ್ವಾಳ : ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ನಿ) ಬಿರ್ವ ಸೆಂಟರ್ ಮೆಲ್ಕಾರ್ ಪಾಣೆಮಂಗಳೂರು ಇದರ ೨೦೧೯-೨೦ ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ ೨೯/೧೧/೨೦೨೦ ನೇ ಆದಿತ್ಯವಾರ ಬೆಳ್ಳಿಗ್ಗೆ ೧೧ ಕ್ಕೆ ಸಂಘದ ಆವರಣದಲ್ಲಿ ಅದ್ಯಕ್ಷರಾದ ಶ್ರೀ ಕೆ.ಸೇಸಪ್ಪ ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿನಡೆಯಿತು.
ಸಂಘದ ಉಪಾಧ್ಯಕ್ಷರಾÀದ ಶ್ರೀ ಕೆ ಹರಿಕೃಷ್ಣ ಬಂಟ್ವಾಳ್À ಇವರು ಮಾತನಾಡುತ್ತಾ ಸಂಘವು ೨೦೧೯-೨೦ ನೇ ಸಾಲಿನ ಮಾರ್ಚ್ ತಿಂಗಳ ಕೊನೆಗೆ ೪೭ ಕೋಟಿ ರೂ ವ್ಯವಹಾರ ನಡೆಸಿ ೧೧ ಕೋಟಿ ಠೇವಣಿ ಸಂಗ್ರಹಿಸಿ ೯ ಕೋಟಿ ೬೦ ಲಕ್ಷ ಸಾಲ ನೀಡಿ ೭,೨೦,೦೯೯/-ರೂ ಲಾಭ ಗಳಿಸಿದೆ. ಸದಸ್ಯರಿಗೆ ೧೧% ಡಿವಿಡೆಂಟ್ ನೀಡುವುದೆಂದು ಘೋಷಿಸಿದರು.
ಮುಂದಿನ ವರ್ಷದಲ್ಲಿ ೧೫ ಕೋಟಿ ಠೇವಣಿ ಸಂಗ್ರಹಿಸುವುದೆAದು ಗುರಿ ಹೊಂದಲಾಗಿದೆ ಮತ್ತು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿದರು ಸಂಘದ ವರದಿ ಮತ್ತು ಲೆಕ್ಕ ಪತ್ರಗಳನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಸಭೆಯಲ್ಲಿ ಮಂಡಿಸಿದರು.
ಈ ಸಭೆಯಲ್ಲಿ ಸಂಘದ ನಿರ್ದೆಶಕರುಗಳಾದ ಕೆ.ಸಂಜೀವ ಪೂಜಾರಿ ,ನಾರಯಣ ಪೂಜಾರಿ ಬೊಳ್ಳುಕಲ್ಲು,ಉಮೇಶ್ ಸುವರ್ಣ ತುಂಬೆ, ಸಂತೋಷ್ ಕುಮಾರ್ ಕೊಟ್ಟಿಂಜ , ರತ್ನಾಕರ ಪೂಜಾರಿ ಮೆಲ್ಕಾರ್,ಶ್ರೀಮತಿ ಪುಷ್ಪಾವತಿ ,ಶ್ರೀಮತಿ ತುಳಸಿ ಇರಾ ಉಪಸ್ಥಿತರಿದ್ದರು. ನಿರ್ದೆಶಕರಾದ ರಮೇಶ್ ಅನ್ನಪಾಡಿ ಕಾರ್ಯಕ್ರಮ ನಿರ್ವಹಿಸಿದರು ಮತ್ತು ನಿರ್ದೆಶಕರಾದ ರತ್ನಾಕರ ಪೂಜಾರಿ ನಾಡಾರು ವಂದನಾರ್ಪಣಗೈದರು.

