ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ‘ಸುಮಂಗಲಾ  ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿಯಮಿತ ಬಂಟ್ವಾಳ ಶಾಖೆಯು ಸೋಮವಾರ ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿರುವ  “ಗೋವಿಂದ ರೆಸಿಡೆನ್ಸಿ”  ಕಟ್ಟಡಕ್ಕೆ  ವಿದ್ಯುಕ್ತವಾಗಿ ಸ್ಥಳಾಂತರಗೊಂಡಿತು.ರಾಜ್ಯ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಸ್ಥಳಾಂತರಿತವಾದ ಸುಮಂಗಲಾ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ನಿಯಮಿತವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಸಮಾಜದ ಸರ್ವರಿಗೂ ಈ ಸಂಸ್ಥೆಯಿಂದ ಒಳಿತಾಗಲಿ ಎಂದು ಶುಭಹಾರೈಸಿದರು.DSC_9772

  ಪುರಸಭೆಯ ಉಪಾಧ್ಯಕ್ಷೆ ಜೇಸಿಂತಾ ಡಿಸೋಜ,ಶ್ರೀ ಕನಪಾಡಿ ದೈವಸ್ಥಾನದ ಆಡಳಿತ ಮೊಕ್ತೇಸರ ರಾಜಶೇಖರ ರೈ,ಬಂಟ್ವಾಳ ತಾ.ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ರಘ ಸಪಲ್ಯ,        ಎಸ್ ವಿಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶಿವರಾಯ ಕಾಮತ್,ವರ್ತಕರ ವಿ.ಸ.ಸ.ನಿಯಮಿತದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಕಟ್ಟಡದ ಮಾಲಕರಾದ ಸುಲೋಚನಾ,ಜಯಪ್ರಕಾಶ್ ಬಂಟ್ವಾಳ ರವರು ಅತಿಥಿಯಾಗಿದ್ದು ಶುಭಹಾರೈಸಿದರು.

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಸಚಿನ್ ಮೆಲ್ಕಾರ್, ನಿಯಮಿತದ ಉಪಾಧ್ಯಕ್ಷ   ಪದ್ಮನಾಭ ಇಡ್ಕಿದು,ಮುಖ್ಯ ಕಾರ್ಯನಿರ್ವಾಹಕರಾದ ವಸಂತ ಪಿ., ನಿರ್ದೇಶಕರುಗಳಾದ  ಕೃಷ್ಣಪ್ಪ ಗಾಣಿಗ ಮಾಣಿಮಜಲು, ಸದಾಶಿವ ಪುತ್ರನ್ ಜಕ್ರಿಬೆಟ್ಟು , ದಾಮೋದರ ಸಪಲ್ಯ ನರಿಕೊಂಬು, ಈಶ್ವರ  ಮೆಲ್ಕಾರ್ , ರವೀಂದ್ರ ಸಪಲ್ಯ ಬೋಳಂತೂರು,  ಸಂದೀಪ್ ಕುಮಾರ್. ಹೆಚ್ ಮಾರ್ನಬೈಲ್,  ಶರತ್ ಹೆಚ್ ನರಿಕೊಂಬು,  ಯಶೋಧ ಬಿ.ಕೆ. ಶಂಭೂರು,ಬಬಿತಾ ಸಚಿನ್, ಮೆಲ್ಕಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.ನಿಯಮಿತದ ಅಧ್ಯಕ್ಷ ನಾಗೇಶ್ ಕಲ್ಲಡ್ಕ ಸ್ವಾಗತಿಸಿ,ವಂದಿಸಿದರು. ಕೃಷ್ಣರಾಜ್ ಭಟ್ ಅವರು ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸಿದರು.

By suddi9

Leave a Reply

Your email address will not be published. Required fields are marked *