ಬಂಟ್ವಾಳ: ಇಲ್ಲಿನ ಬಂಟ್ವಾಳ ಕಸ್ಬಾ ಗ್ರಾಮದ ಪಣೆಕಲ ಶ್ರೀ ಮಹಮ್ಮಾಯಿ ದುರ್ಗಾಂಬಾ ದೇವಸ್ಥಾನ ಹಾಗೂ ಪರಿವಾರ ಶಕ್ತಿಗಳ ಸೇವಾಟ್ರಸ್ಟ್ ನ ವತಿಯಿಂದ ದುರ್ಗಾಂಬ ದೇವಾಲಯದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಪ್ರಧಾನ ತಂತ್ರಿ ಉಮೇಶ ಶರ್ಮ ಕೋಡಿಕಲ್ ಇವರ ಮಾರ್ಗದರ್ಶನದಲ್ಲಿ, ವಸಂತ ಭಟ್ ಪಣೆಕಲ ಅವರ ಪೌರೋಹಿತ್ಯದಲ್ಲಿ ಪಾದುಕಾನ್ಯಾಸ ಕಾರ್ಯಕ್ರಮ ಶುಕ್ರವಾರ ಬೆಳಿಗ್ಗೆ ನಡೆಯಿತು.

BTW_NOV27_5
ಶಾಸಕ ಯು.ರಾಜೇಶ್ನಾಯಕ್ , ಮಾಜಿ ಸಚಿವರಾದ ಬಿ.ರಮನಾಥ ರೈ, ಬಿ. ನಾಗರಾಜ ಶೆಟ್ಟಿ, ಜಿ.ಪಂ.ಸದಸ್ಯರಾದ ತುಂಗಪ್ಪ ಬಂಗೇರ, ಪದ್ಮಶೇಖರ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಟ್ರಸ್ಟ್ನ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಅನುವಂಶಿಯ ಟ್ರಸ್ಟಿ ದಿನೇಶ್ ಪೂಜಾರಿ ಮಣ್ಣಾಪು, ಆಡಳಿತ ಮಂಡಳಿ ಅಧ್ಯಕ್ಷ ಸಂಜೀವ ಮೂಲ್ಯ, ನಾಗರಾಜ ಶಿಲ್ಪಿ ಕಲ್ಲಡ್ಕ, ಆಡಳಿತ ಸಮಿತಿ ಹಾಗೂ ಜೀಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಊರಿನ ಮುಖ್ಯಸ್ಥರು, ಮಹಿಳಾ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಪಣೆಕಲ ಶ್ರೀ ಮಹಮ್ಮಾಯಿ ದುರ್ಗಾಂಬಾ ದೇವಸ್ಥಾನದಲ್ಲಿ ಪಾದುಕಾನ್ಯಾಸ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *