ಬಂಟ್ವಾಳ: ಇಲ್ಲಿನ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಮತ್ತು ಸಿದ್ಧಕಟ್ಟೆ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ‘ನಮ್ಮೂರು – ನಮ್ಮ ಕೆರೆ’ ಯೋಜನೆಯಡಿ ಬದ್ಯಾರು ಸಾರ್ವಜನಿಕ ಕೆರೆ ಹೂಳೆತ್ತಿ ಅಭಿವೃದ್ಧಿಗೊಳಿಸಲು ಬುಧವಾರ ನೂತನ ಸಮಿತಿ ರಚಿಸಿದರು.ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಕೆರೆಗಳ ಮಹತ್ವ ಮತ್ತು ಜಲ ಮೂಲ ಉಳಿಸುವ ಅಗತ್ಯತೆ ಬಗ್ಗೆ ವಿವರಿಸಿದರು. ಯೋಜನಾಧಿಕಾರಿ ಪಿ.ಜಯಾನಂದ ಯೋಜನೆ ಬಗ್ಗೆ ಮಾಹಿತಿ ನೀಡಿದರು.

25btl-badyar
ಇದೇ ವೇಳೆ ಸ್ಥಳೀಯ ಕೃಷಿಕ ಸುರೇಶ್ ಶೆಟ್ಟಿ ಕುತ್ಲೋಡಿ ಅದ್ಯಕ್ಷತೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಉಪಾಧ್ಯಕ್ಷರಾಗಿ ಶೇಖರ್ ಮತ್ತು ಕೋಶಾಧಿಕಾರಿಯಾಗಿ ಸುಂದರ ಆಯ್ಕೆಗೊಂಡರು. ಪಿಡಿಒ ತುಳಸಿ, ಆಡಳಿತಾಧಿಕಾರಿ ಪ್ರದೀಪ್ ಡಿಸೋಜ, ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು, ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಸುಂದರ ಶಾಂತಿ, ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ , ಎಂಜಿನಿಯರ್ ವಿಕೇಶ್ ಶೆಟ್ಟಿ, ಒಕ್ಕೂಟ ಅಧ್ಯಕ್ಷೆ ಸುಜಾತ ರಾಜು ಪೂಜಾರಿ, ಕೃಷಿ ಅಧಿಕಾರಿ ಜನಾರ್ಧನ್, ಸೇವಾ ಪ್ರತಿನಿಧಿ ಹೇಮಲತಾ, ಮೇಲ್ವ್ವಿಚಾರಕಿ ಹರಿಣಾಕ್ಷಿ ರೈ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *