ಶ್ರೀನಿವಾಸಪುರ : ತಾಲ್ಲೂಕಿನ ಗೌನಿಪಲ್ಲಿ ಗ್ರಾಮದ ದೊಡ್ಡ ಪ್ರಮಾಣದ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಶಂಕರ್‌ ಪ್ರಸಾದ್‌, ಉಪಾಧ್ಯಕ್ಷೆಯಾಗಿ ನಾಸಿರಾ ವೈ.ರಿಯಾಜ್‌ ಪಾಷ ಬುಧವಾರ ಅವಿರೋಧ ಆಯ್ಕೆಯಾದರು. ಬಳಿಕ ಸಂಘದ ಅಧ್ಯಕ್ಷ ಶಂಕರ್‌ ಪ್ರಸಾದ್‌ ಮಾತನಾಡಿ, ‘ಸಹಕಾರ ಸಂಘ, ಹಾಗೂ ಫಲಾನುಭವಿಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬಡ್ಡಿರಹಿತ ಸಾಲ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುತ್ತೇನೆ.
1......
ಸಹಕಾರ ಸಂಘದ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳ ಫಲಾನುಭವಿಗಳಿಗೆ ಆರ್ಥಿಕ ಚೈತನ್ಯ ನೀಡಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಗ್ರಾಮದ ಮುಖ್ಯ ರಸ್ತೆಗಳಲ್ಲಿ ವಿಜಯೋತ್ಸವ ನಡೆಸಿ ಸಂಭ್ರಮಿಸಿದರು.
2........
  ಮುಖಂಡರಾದ ವೈ.ಎಂ.ಅಮೀರ್‌ ಖಾನ್‌, ಎಂ.ರಾಮಕೃಷ್ಣೇಗೌಡ, ಜಿ.ವಿ.ರಘುನಾಥರಾವ್‌, ಕೆ.ಟಿ.ಅಪ್ಪಿರೆಡ್ಡಿ, ಜಾಮಕಾಯಿಲು ವೆಂಕಟೇಶ್‌, ಪಿ.ಟಿ.ಶಂಕರ್‌, ಚಂದ್ರಮೌಳಿ, ಎಂ.ಆರ್‌.ಆನಂದ್‌, ಟಿ.ಜಿ.ರಮೇಶ್‌, ಷಬ್ಬೀರ್‌ ಖಾನ್, ಅಜ್‌ಮಲ್‌ ಕಾನ್‌, ರಿಯಾಜ್‌ ಖಾನ್‌, ಫಿರೋಜ್‌ ಖಾನ್‌, ಸಿ.ವಿ.ವೆಂಕಟರವಣ, ವಿಶ್ವನಾಥ್‌, ಮಧು ಇದ್ದರು.

By suddi9

Leave a Reply

Your email address will not be published. Required fields are marked *