ಬಂಟ್ವಾಳ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿಯ ಜನ್ಮಷಷ್ಟ್ಯಾಬ್ದಿ ಸಂಭ್ರಮದ ಹಿನ್ನಲೆಯಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಹೋಬಳಿಯನ್ನು ಒಳಗೊಂಡ ಬಂಟ್ವಾಳ ವಲಯ ಸಮಿತಿಯ ಪೂರ್ವಭಾವಿ ಸಭೆ ಮಂಗಳವಾರ ಸಂಜೆ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಮುಂದೆ ಕೈಗೊಳ್ಳುವ ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿ.ಪಂ. ಸದಸ್ಯ ರವೀಂದ್ರ ಕಂಬಳಿ ಪ್ರಮುಖರಾದ ಜಗನ್ನಾಥ ಚೌಟ, ಯಶವಂತ ವಿಟ್ಲ, ಚಂದ್ರಹಾಸ ಶೆಟ್ಟಿ ರಂಗೋಲಿ, ಮಂಜು ವಿಟ್ಲ, ಪ್ರೊ.ತುಕರಾಂ ಪೂಜಾರಿ, ಕೃಷ್ಣ ಕುಮಾರ್ ಪೂಂಜ ಫರಂಗಿಪೇಟೆ, ಅಶೋಕ್ ಶೆಟ್ಟಿ ಸರಪಾಡಿ, ವಸಂತ ಶೆಟ್ಟಿ ಕೇದಗೆ, ಸಂಪತ್ ಕುಮಾರ್ ಶೆಟ್ಟಿ , ಸುಭಾಶ್ಚಂದ್ರ ಜೈನ್, ರಘು ಸಪಲ್ಯ, ರಾಮದಾಸ್ ಬಂಟ್ವಾಳ, ಎಚ್ಕೆ ನಯನಾಡು, ಪದ್ಮನಾಭ ಒಡಿಯೂರು, ಬಾಲಕೃಷ್ಣ ಉಪಸ್ಥಿತರಿದ್ದರು.

