ಬಂಟ್ವಾಳ: ಪುರಾಣ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳಕ್ಕೆ ಮಂಗಳವಾರ ಜಿಲ್ಲಾ ಉಸ್ತುವಾರಿ,ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿಯವರು ಭೇಟಿ ನೀಡಿದರು.
ಈ ಸಂದರ್ಭ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಉಪಸ್ಥಿತಿಯಲ್ಲಿ ಆಡಳಿತ ಮಂಡಳಿಯ ಸಭೆ ನಡೆಸಿ ದೇಗುಲದಲ್ಲಿ ಮುಂದಿನ ದಿನಗಳಲ್ಲಿ ಆಗಬೇಕಾಗಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿದರು. ದೇಗುಲದ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ ,ಅನುವಂಶೀಯ ಮೊಕ್ತೇಸರರುಗಳಾದ ಡಾ.ಮಂಜಯ್ಯ ಶೆಟ್ಟಿ,ಯು.ತಾರನಾಥ ಆಳ್ವ,ಸೂರ್ಯ ನಾರಾಯಣ ರಾವ್ ಚೇರಾ,ಮೊಕ್ತೇಸರ ಹಾಗೂ ಕ್ಷೇತ್ರದ ಪವಿತ್ರಪಾಣಿ ಮಾಧವ ಭಟ್,ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ, ಕ್ಷೇತ್ರದ ಸುಬ್ರಹ್ಮಣ್ಯ ತಂತ್ರಿ, ಕೊಡಿಮಜಲ್ ಅನಂತಪದ್ಮನಾಭ ಉಪಾಧ್ಯಾಯ , ಕೆ.ರಾಮ್ ಭಟ್ ಮೊದಲಾದವರು ಹಾಜರಿದ್ದು ಸಲಹೆ,ಸೂಚನೆಗಳನ್ನಿತ್ತರು.
ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಕ್ಷೇತ್ರ ದಲ್ಲಿ ಸ್ವಾಗತಿಸಲಾಯಿತು.

