ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ನಾಗರಿಕ ಜಾಗೃತ ಸಮಿತಿ ವತಿಯಿಂದ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಮತ್ತು ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಸಹಯೋಗದಲ್ಲಿ ನರಿಕೊಂಬು ಮತ್ತು ಶಂಭೂರು ಗ್ರಾಮಗಳ ಫಲಾನುಭವಿಗಳಿಗೆ” ಕ್ಷೇಮ ಹೆಲ್ತ್ ಕಾರ್ಡ್” ವಿತರಣಾ ಕಾರ್ಯಕ್ರಮ ನರಿಕೊಂಬುನಲ್ಲಿ ನಡೆಯಿತು. ಮಾಜಿ ಸಚಿವ ರೈ ಯವರು ಫಲಾನುಭವಿಗಳಿಗೆ ಹೆಲ್ತ್ ಕಾರ್ಡ್ ವಿತರಿಸಿ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ತಾನು ಗಳಿಸಿದರಲ್ಲಿ ಸ್ವಲ್ಪ ಅಂಶವನ್ನು ಸಮಾಜದ ಏಳಿಗೆಗಾಗಿ ವಿನಿಯೋಗಿಸುವವರಿಗೆ ದೇವರ ಆಶೀರ್ವಾದ ಯಾವತ್ತು ಇರುತ್ತದೆ ಎಂದರು.
ಸೇವಾಂಜಲಿ ಪ್ರತಿಷ್ಠಾನದ ಕೃಷ್ಣಕುಮಾರ್ ಪೂಂಜ,ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ,ನಾಗರಿಕ ಜಾಗೃತ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ್, ಬಂಟ್ವಾಳ,ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್,ಸುದೀಪ್ ಕುಮಾರ್ ಶೆಟ್ಟಿ, ಸ್ಥಳೀಯರಾದ ಆಲ್ಫೋನ್ಸ್ ಮೆನೇಜಸ್,ಉಮೇಶ್ ಬೋಳಂತೂರು,ಮಾಧವ ಪೂಜಾರಿ ಕರ್ಬೆಟ್ಟು,ಚಂದ್ರಶೇಖರ ಪೂಜಾರಿ ಕೋರ್ಯ,ಆಲ್ಬರ್ಟ್ ಮೆನೇಜಸ್ ವೇದಿಕೆಯಲ್ಲಿದ್ದರು. ಸಮಿತಿ ಪ್ರಮುಖರಾದ ಉಪಸ್ಥಿತರಿದ್ದರು.ಸಾಯಿರಾಮ್ ನಾಯಕ್ ಸ್ವಾಗತಿಸಿ,ನವೀನ್ ಮೆನೇಜಸ್ ವಂದಿಸಿದರು, ಉಮೇಶ್ ಬೋಳಂತೂರು ನಿರೂಪಿಸಿದರು.

