ಬಂಟ್ವಾಳ: ಇಲ್ಲಿನ ಪುರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ  ಮಹಮ್ಮದ್ ಶರೀಫ್ ಹಾಗೂ ಉಪಾಧ್ಯಕ್ಷರಾದ ಜೆಸಿಂತಾ ಡಿಸೋಜಾ ರವರ ಪದಗ್ರಹಣ ಸಮಾರಂಭ  ಬುಧವಾರ ಪುರಸಭಾ ಕಚೇರಿಯಲ್ಲಿ ನಡೆಯಿತು.  ಮಾಜಿ ಸಚಿವ ರಮಾನಾಥ ರೈ ಅವರು ಈ ಸಂದರ್ಭ ಭಾಗವಹಿಸಿ ಮಾತನಾಡಿ, ಅಧಿಕಾರ ಶಾಹಿಗಳು ಅಧಿಕಾರ ಮಾಡಿದ್ದರಿಂದ ಪುರಸಭೆಯ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿದ್ದು,ನೂತನ ಅಧ್ಯಕ್ಷ ಉಪಾಧ್ಯಕ್ಷರು ಸವಾಲುಗಳನ್ನು  ಎದುರಿಸಿ ಬಂಟ್ವಾಳ ಪುರಸಭೆಯನ್ನು ಕ್ರಿಯಾಶೀಲವಾಗಿ ಮುನ್ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.DSC_1088
 ತಾನು ಶಾಸಕನಾಗಿ, ಸಚಿವನಾಗಿದ್ದ ಅವಧಿಯಲ್ಲಿ  ಪುರಸಭಾ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ. ಆದರೆ ಕಳೆದ ಎರಡೂವರೆ ವರ್ಷಗಳಲ್ಲಿ ಅಭಿವೃದ್ಧಿ ಗೆ ಹಿನ್ನಡೆಯಾಗಿದೆ.ಪುರಸಭೆ ನಗರ ಸಭೆಯಾಗಲು ರಾಜಕೀಯ ಪ್ರೇರಿತ ಶಕ್ತಿಯಿಂದ ಸಾಧ್ಯವಾಗಿಲ್ಲ.ಸಮಗ್ರ ಒಳಚರಂಡಿ ಯೋಜನೆಗೆ 60 ಕೋ.ರೂ.ಅನುದಾನ ಮಂಜೂರಾತಿ ಗೊಳಿಸಲಾಗಿದ್ದರೂ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದ ಇನ್ನು ಈ ಯೋಜನೆ ಕಾರ್ಯಗತವಾಗಿಲ್ಲ, ತನ್ನ  ಅವಧಿಯಲ್ಲಿ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿತ್ತು ಎಂದರು.
ನೂತನವಾಗಿ ಅಧ್ಯಕ್ಷ ರಾಗಿ ಅಧಿಕಾರವಹಿಸಿಕೊಂಡ ಮಹಮ್ಮದ್ ಶರೀಫ್ ಮಾತನಾಡಿ, ಮುಂದಿನ ಅವಧಿಯಲ್ಲಿ ಪುರಸಭೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಮಾರ್ಗದರ್ಶನ ದಲ್ಲಿ , ಸರ್ವ ಸದಸ್ಯರ ಸಹಕಾರ  ಹಾಗೂ ನನ್ನ ವೈಯಕ್ತಿಕ ಅನುಭವದ ಮೂಲಕ ಮಾದರಿ  ಪುರಸಭೆಯನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರಲ್ಲದೆ,ಪುರಸಭೆಯ ಎಲ್ಲಾ ಸದಸ್ಯರು ಬೆಂಬಲ ನೀಡುವಂತೆ ಮನವಿ ಮಾಡಿದರು.
 ಉಪಾಧ್ಯಕ್ಷೆ ಜೆಸಿಂತಾ ಮಾತನಾಡಿ, ರಮಾನಾಥ ರೈ ಅವರ ಮಾರ್ಗದರ್ಶನ , ಸ್ಪೂರ್ತಿಯಿಂದಾಗಿ ನಾನು ಜನಪ್ರತಿನಿಧಿಯಾಗಲು ಸಾಧ್ಯವಾಯಿತು ಎಂದು ಅವರು ಹೇಳಿದರು. ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷರಾದ ಮಿಥುನ್ ರೈ ಶುಭ ಕೋರಿದರು.ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ , ಜನರಿಗೆ ಸುಲಭ ರೀತಿಯಲ್ಲಿ ಪುರಸಭೆಯ ಕೆಲಸಗಳು ಆಗಲಿ, ಅಧಿಕಾರಿ ವರ್ಗದವರು, ಸದಸ್ಯರು ಜೊತೆಯಾಗಿ ಕೆಲಸ ಮಾಡಿ ಅಭಿವೃದ್ಧಿಯಲ್ಲಿ ಕೈ ಜೋಡಿಸಿ, ಇಲ್ಲದಿದ್ದರೆ ಅಧಿಕಾರಿಗಳಿಗೆ  ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದು ಎಂಬ ಎಚ್ಚರಿಕೆಯನ್ನು ನೀಡಿದರು.
ಜಿ.ಪಂ.ಸದಸ್ಯರಾದ ಮಂಜುಳಾ ಮಾವೆ,ಪದ್ಮಶೇಖರ್ ಜೈನ್ ,  ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ,  ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಸುದೀಪ್ ಕುಮಾರ್,  ಮಾಜಿ ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಮಾಜಿ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಅವರು ನೂತನ ಅಧ್ಯಕ್ಷ -ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.        ತಾ.ಪಂ.ಸದಸ್ಯ ಸಂಜೀವ ಪೂಜಾರಿ, , ಪ್ರಮುಖರಾದ ಪಿ.ಎ.ರಹೀಂ,ಜಗದೀಶ್ ಕೊಯಿಲ, ಪದ್ಮನಾಭ ರೈ, ಜಯಂತಿ,ಪ್ರವೀಣ್ ಕಿಣಿ,ಬಿ‌ಮೋಹನ್ ,ಮಹಮ್ಮದ್ ನಂದರ ಬೆಟ್ಟು,ಜಗನ್ನಾಥ ತುಂಬೆ,ವೆಂಕಪ್ಪ ಪೂಜಾರಿ ಬಂಟ್ವಾಳ ಹಾಗೂ ಪುರಸಭೆಯ ಎಸ್ ಡಿಪಿಐ ಸದಸ್ಯರು,ಸಿಬ್ಬಂದಿಗಳು ಹಾಜರಿದ್ದರು. ಪುರಸಭಾ ಸಿಬ್ಬಂದಿ ರಜಾಕ್ ಸ್ವಾಗತಿಸಿದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್ ಕಾರ್ಯಕ್ರಮ ನಿರೂಪಿಸಿದರು.ಪುರಸಭಾ ಸದಸ್ಯ ವಾಸು ಪೂಜಾರಿ ವಂದಿಸಿದರು.ಪುರಸಭಾ ಮುಖ್ಯಾಧಿಕಾರಿ ಲೋನಾ ಬ್ರಿಟ್ಟೋ, ಹಾಗೂ ಬಿಜೆಪಿ ಸದಸ್ಯರು ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದರು

By suddi9

Leave a Reply

Your email address will not be published. Required fields are marked *