ಬಂಟ್ವಾಳ: ಮಾಣಿ ಗ್ರಾಮದ ಕೊಡಾಜೆ -ಕಲ್ಲೋಲ್ಲಿಗುಡ್ಡೆ ಪ್ರದೇಶಕ್ಕೆ ಕುಡಿಯುವ ನೀರಿನ ಯೋಜನೆಗಾಗಿ ಈ ಭಾಗದ ಜಿ.ಪಂ,  ತಾ.ಪಂ.  ಮತ್ತು ಗ್ರಾ.ಪಂ. ಸದಸ್ಯರ  ಅನುದಾನದಿಂದ ಸುಮಾರು ರೂ.6.50 ಲಕ್ಷ ವೆಚ್ಚದಲ್ಲಿ  ನೀರಿನ ಟ್ಯಾಂಕಿಯ ನಿರ್ಮಾಣಕ್ಕೆ  ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ಶಿಲಾನ್ಯಾಸ ನೆರೆವೇರಿಸಿದರು.IMG-20201116-WA0086

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ  ಚಂದ್ರಪ್ರಕಾಶ್ ಶೆಟ್ಟಿ,  ಮಂಜುಳಾ ಮಾಧವ ಮಾವೆ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ  ಕುಶಲ ಪೆರಾಜೆ, ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ನಿಕಟ ಪೂರ್ವ ಪಂಚಾಯತ್ ಸದಸ್ಯರಾದ ಇಬ್ರಾಹಿಂ ಕೆ ಮಾಣಿ, ರಮಣಿ ಡಿ ಪೂಜಾರಿ, ಪ್ರೀತಿ ಡಿನ್ನಾ ಪಿರೇರಾ,ಮಾಣಿ ಯುವ ಕಾಂಗ್ರೆಸ್ ಅಧ್ಯಕ್ಷ ವಿಕೇಶ್ ಶೆಟ್ಟಿ, ಪ್ರಮುಖರಾದ ಶಿವರಾಮ ಶೆಟ್ಟಿ, ವಿಶ್ವನಾಥ ಶೆಟ್ಟಿ, ಹಸ್ಸಾಯಿನಾರ್, ಇಸ್ಮಾಯಿಲ್, ಸತೀಶ್ ಬೈಲ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *