ಬಂಟ್ವಾಳ:ವೀರಕಂಬ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದ 2019 -20 ನೇ ಸಾಲಿನ ಮಹಾ ಸಭೆಯು ವೀರಕಂಭ ಗ್ರಾಮ ಪಂಚಾಯತ್ ನ ರಾಜೀವ ಗಾಂಧಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ದಿಲೀಪ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು .ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ 25 ಶೇಕಡಾ ಡಿವಿಡೆಂಟ್ ನ್ನು ಅಧ್ಯಕ್ಷ ದಿಲೀಪ್ ಕುಮಾರ್ ಈ ಸಂದರ್ಭದಲ್ಲಿ ಘೋಷಿಸಿದರು .
ಸಂಘಕ್ಕೆ ಹಾಲು ಪೂರೈಸುತ್ತಿರುವ ಸದಸ್ಯರಿಗೆ ಪ್ರೋತ್ಸಾಹದಾಯಕವಾಗಿ ಉಚಿತವಾಗಿ ಫೈಬರ್ ಬಕೆಟ್ ವಿತರಿಸಲಾಯಿತು . ಕೆಎಂಎಫ್ ವಿಸ್ತರಣಾಧಿಕಾರಿ ದೇವರಾಜ್ ರೈತರಿಗೆ ಹಾಲಿನ ಗುಣಮಟ್ಟ ಹಾಗೂ ಪಶು ಸಾಕಣೆ ಬಗ್ಗೆ ಮಾಹಿತಿ ನೀಡಿದರೆ, ವಿಸ್ತರಣಾಧಿಕಾರಿ ಜಗದೀಶ್ ರೈತರಿಗೆ ಕೆ. ಎಂ. ಎಫ್ ಹಾಗೂ ಸರಕಾರದಿಂದ ರೈತರಿಗೆ ಹೈನುಗಾರಿಕೆಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಂಘದ ನಿರ್ದೇಶಕ ಅಶೋಕ್ ಕುಮಾರ್ ತೆಕ್ಕಿಪಾಪು ಸ್ವಾಗತಿಸಿ, ಕಾರ್ಯದರ್ಶಿ ಹರೀಶ್ ಬಂಗೇರ ವರದಿಯನ್ನು ವಾಚಿಸಿದರು .ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ಜಗನ್ನಾಥ ಆಳ್ವ ಮೈರ ,ವೆಂಕಪ್ಪ ಪೂಜಾರಿ ಮೈರ ,ನಾರಾಯಣ ಮೂಲ್ಯ ಬೆತ್ತ ಸರವು ,ಪದ್ಮನಾಭ ಬಂಗೇರ ಮಜಿ, ಉಮೇಶ ಮಜಿ, ಪದ್ಮನಾಭ ಗೌಡ ಮೈರ, ಜಯಂತಿ ಉಪಸ್ಥಿತರಿದ್ದರು ನಿರ್ದೇಶಕ ಕೇಶವ ನಾಯ್ಕ ವಂದಿಸಿದರು
