ಮೂಡುಬಿದಿರೆ: ಬೆಳುವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದಕೆರೆಗೆ ಭಾನುವಾರ ಸ್ನೇಹಿತರೊಂದಿಗೆ ಈಜಲು ಬಂದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ

ಸುರತ್ಕಲ್ ಸಮೀಪದ ಕಾಟಿಪಳ್ಳ ನಿವಾಸಿ ನಿಹಾಲ್ ಶಾ( 20 ) ಮೃತಪಟ್ಟ ಯುವಕ. ಈತ ತನ್ನ ಏಳು ಮಂದಿ ಸ್ನೇಹಿತರೊಡನೆ ಬಾನುವಾರ ಸಾಯಂಕಾಲ ಈಜಲು ಬಂದಿದ್ದ. ಈಜುವ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಭಾನುವಾರ ರಾತ್ರಿ ಈತನ ಶವವನ್ನು ಬೆಳುವಾಯಿಯ ಈಜುಗಾರ ಅಂಥೋಣಿ ಎಂಬವರು ಮೇಲಕ್ಕೆತ್ತಿದ್ದಾರೆ..
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
