ಬಂಟ್ವಾಳ : ಪುರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೇಸ್ -ಎಸ್ ಡಿಪಿಐಯೊಂದಿಗೆ ಅಪವಿತ್ರಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ಮೂಲಕ ಎರಡು ಪಕ್ಷಗಳ ಬಣ್ಣ ಬಯಲಾಗಿದೆ ಎಂದು ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ ಅಧ್ಯಕ್ಷ ದೇವಪ್ಪ ಪೂಜಾರಿ  ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.devappa poojary

ಚುನಾವಣಾ  ಪೂರ್ವದಿಂದಲೂ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡುತ್ತಿಲ್ಲ ಎಂದು ಹೇಳಿಕೊಂಡಿದ್ದ ಉಭಯ ಪಕ್ಷದ ನಾಯಕರು ಅಧಿಕಾರಕ್ಕಾಗಿ ಯಾವ ಮಾರ್ಗವನ್ನು ಹಿಡಿಯಲು ಕಾಂಗ್ರೆಸ್- ಎಸ್ ಡಿ ಪಿಐ ಬದ್ದವಾಗಿದೆ ಎಂಬುದನ್ನು  ತೋರಿಸಿ ಕೊಟ್ಟಿದ್ದೆ.

ಜಾತ್ಯತೀತೆಯ ಅರ್ಥವೆ ಗೊತ್ತಿಲದ ಪಕ್ಷಗಳ ಈ ಬೆಳವಣಿಗೆಯನ್ನು ಕ್ಷೇತ್ರದ ಜನತೆ ಗಮನಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಸ್ ಡಿ ಪಿ ಐ ಗೆ ಕ್ಷೇತ್ರ ಜನತೆಗೆ ತಕ್ಕ ಪಾಠ ಕಲಿಸದ್ದಾರೆ. ಈ ಎರಡು ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳೆಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *