ಮೂಡುಬಿದಿರೆ:ರಾಜ್ಯ ಸರ್ಕಾರದ ಪ್ರತಿಷ್ಠಿತ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಮೂವರು ಕಂಬಳ ಓಟಗಾರರನ್ನು ಮೂಡುಬಿದಿರೆ ಶಾಸಕ, ಇಲ್ಲಿನ ಕೋಟಿಚೆನ್ನಯ ಜೋಡು ಕರೆ ಕಂಬಳ ಸಮಿತಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಬುಧವಾರ ತಮ್ಮ ಸೇವಕ ಕಚೇರಿಯಲ್ಲಿ ಸನ್ಮಾನಿಸಿದರು.
ಕ್ರೀಡಾರತ್ನ ಪುರಸ್ಕೃತ ಕಂಬಳ ಓಟಗಾರರಾದ ಶ್ರೀನಿವಾಸ ಗೌಡ ಅಶ್ವತ್ಥಪುರ, ಪ್ರವೀಣ್ ಕೋಟ್ಯಾನ್ ಪಣಪಿಲ, ಸುರೇಶ್ ಶೆಟ್ಟಿ ಅವರನ್ನು ಶಾಸಕರು ಗೌರವಿಸಿದರು.
ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ,
ಕಂಬಳ ಸಮಿತಿಯ ಪದಾಧಿಕಾರಿಗಳಾದ ನಾಗಾರಜ ಪೂಜಾರಿ, ರಂಜಿತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
