ಬಂಟ್ವಾಳ: ಇಲ್ಲಿನ ಭಂಡಾರಿಬೆಟ್ಡು ವತ್ಸಿ ಅಪಾಟ್ ೯ ಮೆಂಟ್ ನಲ್ಲಿ ಅ.20 ರಂದು ನಡೆದ ಸುರೇಂದ್ರ ಭಂಡಾರಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದ ಮತ್ತಿಬ್ಬರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ.ಇದರೊಂದೊಗೆ ಈ ಹತ್ಯಾ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11 ಕ್ಕೇರಿದೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪ್ರತೀಕ್(27) ಹಾಗೂ ಮಂಗಳೂರು ತಾಲೂಕಿನ ಕೊಂಚಾಡಿ ನಿವಾಸಿ ಜಯೇಶ್ ಯಾನೆ ಸಚ್ಚು(28 ) ಬಂಧಿತ ಆರೋಪಿಗಳು.

ಪ್ರಕರಣದ ಪ್ರಮುಖ ಆರೋಪಿಗಳಾದ ಸತೀಶ್ ಮತ್ತು ಗಿರೀಶ್ ನಿಗೆ ತಲೆಮರೆಸಿಕೊಳ್ಳಲು ಆರೋಪಿಗಳಾದ ಪ್ರತೀಕ್ ಮತ್ತು ಜಯೇಶ್ ಆಶ್ರಯ,ವಾಹನ ಮತ್ತು ಹಣದ ವ್ಯವಸ್ಥೆ ಮಾಡಿದ್ದ ಹಾಗೂ ಇದಕ್ಕಾಗಿ 2,50 ಲಕ್ಷ ರೂ. ಹಣ ಪಡೆದಿದ್ದಲ್ಲದೆ ಈ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಾಯ ಹಾಗೂ ಪ್ರಮುಖ ಆರೋಪಿ ಆಕಾಶಭವನ ಶರಣ್ ನ ಸೂಚನೆಯಂತೆ ಆರೋಪಿ ಪ್ರದೀಪ್ ನಿಂದ ಸುಫಾರಿ ಹಣವನ್ನು ನಿಂದ ಪಡೆದು ಹತ್ಯೆಗೆ ಸಹಕರಿಸಿದ್ದ ಎಂಬ ವಿಚಾರ ಪೊಲೀಸರ ತನಿಖೆಯಿಂದ ಬಯಲಿಗೆ ಬಂದಿದೆ. ಕೊಲೆ ನಡೆಸಿದ ಪ್ರಕರಣ ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾಗಿ ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಅಜೆಕಲ ನಿವಾಸಿ ಸತೀಶ್ ಕುಲಾಲ್ (39), ನೀರುಮಾರ್ಗ ಬೊಂಡಂತಿಲ ನಿವಾಸಿ ಗಿರೀಶ್ ಯಾನೆ ಗಿರಿ( 28), ಬಂಟ್ವಾಳ ಕಬ್ಬಿನಹಿತ್ಲು ನಿವಾಸಿ ಪ್ರದೀಪ್ ಕುಮಾರ್ ಯಾನೆ ಪಪ್ಪು(36),ಬಂಟ್ವಾಳ ಮಂಡಾಡಿ ನಿವಾಸಿ ಶರೀಪ್ ಯಾನೆ ಸಯ್ಯದ್ ಶರೀಪ್ (34),ವತ್ಸಿ ವಸತಿ ಸಂಕೀರ್ಣದ ಪಾಲುದಾರ ವೆಂಕಪ್ಪ ಪೂಜಾರಿ ಯಾನೆ ವೆಂಕಟೇಶ (42),ಶರಣ್ ಯಾನೆ ಆಕಾಶ್‌ಭವನ ಶರಣ್ ( 35),ಬೆಳ್ತಂಗಡಿ ತಾಲೂಕಿನ ಉಜಿರೆ ನಿವಾಸಿ ರಾಜೇಶ್( 33),ದಿವ್ಯರಾಜ್( 30),
ಅನಿಲ್ ಪಂಪ್‌ವೆಲ್ (35),ಪ್ರತೀಕ್ ( 27) ,ಜಯೇಶ್(28) ಸೇರಿದಂತೆ 11 ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
