ಕಾವೂರು: ಅಯೋಧ್ಯ ಬಲಿದಾನ್ ದಿವಸದ ಸ್ಮರಣಾರ್ಥವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಂಜನೇಯ ಶಾಖೆ ಹಾಗೂ ಕಾವೂರು ಪ್ರಖಂಡದ ವತಿಯಿಂದ ನ.1 ರಂದು ಭಾನುವಾರ ನಗರದ ಎ.ಜೆ. ಆಸ್ಪತ್ರೆಯ ಸಹಯೋಗದೊಂದಿಗೆ ಕಾವೂರು ದ.ಕ.ಸ.ಹಿ.ಪ್ರಾ ಶಾಲೆಯ ವಠಾರದಲ್ಲಿ ನಡೆಯಿತು.ಕಾವೂರು ಪರಿಸರದ 110 ಕಾರ್ಯಕರ್ತರು ರಕ್ತದಾನ ಮಾಡಿದರು.

9b5a7f25-288b-42cc-8910-67f17183904e

198c6f05-466e-4fec-ab9f-9973f8352345

ಉದ್ಯಮಿ ಶ್ರೀ ಪುರುಷೋತ್ತಮ ಪೂಜಾರಿಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ| ಭರತ್ ಶೆಟ್ಟಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಬಜರಂಗದಳ ಜಿಲ್ಲಾ ಸಂಚಾಲಕರಾದ ಪುನೀತ್ ಅತ್ತಾವರ್ ಅವರು ಹಲವಾರು ವರ್ಷಗಳಿಂದ ಬಜರಂಗದಳವು ಜಾತಿ,ಮತ,ಧರ್ಮಗಳನ್ನು ನೋಡದೆ ಹಲವಾರು ರಕ್ತದ ಅವಶ್ಯಕತೆಯ ತುರ್ತು ಸಂದರ್ಭಗಳಲ್ಲಿ ಕ್ಲಪ್ತ ಸಮಯದಲ್ಲಿ ಸ್ಪಂದನೆ ನೀಡುತ್ತಿದೆ‌ ಇದು ಮತ್ತಷ್ಟು ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟರು‌.a1069e03-6872-4a97-b68d-b48d5ac0ff7b

ಮತ್ತೊಬ್ಬ ಅತಿಥಿಯಾಗಿ ಪಾಲ್ಗೊಂಡಿದ್ದ ಏಜೆ ಆಸ್ಪತ್ರೆಯ ಕ್ವಾಲಿಟಿ ಟೆಕ್ನಿಕಲ್ ಮ್ಯಾನೇಜರ್ ಪಿ.ಆರ್.ಗೋಪಾಲಕೃಷ್ಣರವರು ಮಾತನಾಡಿ ಕಳೆದ ಕೋರೋನ ಸಂದರ್ಭದಲ್ಲಿ ನಮ್ಮ ಆಸ್ಪತ್ರೆಯೂ ಸೇರಿದಂತೆ ಮಂಗಳೂರಿನ ಹಲವು ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ತೀವ್ರವಾಗಿ ಎದುರಾದಾಗ ತನ್ನ ಸಾವಿರಾರು ಕಾರ್ಯಕರ್ತರನ್ನು ಕಳುಹಿಸಿ ರಕ್ತದಾನ ಮಾಡಿಸಿದ್ದ ಬಜರಂಗದಳದ ಇಚ್ಛಾ ಶಕ್ತಿ ಯಾವತ್ತಿಗೂ ಮರೆಯಲಾಗದಂತದ್ದು ಎಂದು ಹೇಳುತ್ತಾ ರಕ್ತದಾನದ ಇನ್ನಿತರ ಮಹತ್ವಗಳನ್ನು ಸಾರಿದರು.ಸ್ಥಳೀಯ ಕಾರ್ಪೋರೇಟರ್ ಶ್ರೀಮತಿ ಸುಮಂಗಲರವರು ಲಾಕ್ಡೌನ್ ಸಂದರ್ಭದ ಬಜರಂಗದಳದ ಕಾರ್ಯವನ್ನು ಸ್ಮರಿಸಿ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.ಆಂಜನೇಯ ಶಾಖೆಯ ಸಂಚಾಲಕರಾದ ರಮೇಶ್, ಕಾವೂರು ಪ್ರಖಂಡ ಸಂಚಾಲಕ ಅಜಿತ್ ಕಾವೂರು,ವಿ.ಹಿಂ.ಪ. ಕಾವೂರು ಪ್ರಖಂಡ ಮಾತೃಶಕ್ತಿ ಪ್ರಮುಖರಾದ ಶ್ರೀಮತಿ ಶಶಿಕಲಾ ಚೌಟ,ಬಿಜೆಪಿ ಮುಖಂಡರಾದ ರಣದೀಪ್ ಕಾಂಚನ್ ಬಿಜೆಪಿ ಕಾವೂರು ಶಕ್ತಿ ಕೇಂದ್ರದ ಕಾರ್ಯದರ್ಶಿ ಶೀತೇಶ್ ಕೊಂಡೆ ಹಾಗೂ ಕಾವೂರು ಪ್ರಖಂಡದ ಹಾಗೂ ಎಲ್ಲಾ ಘಟಕಗಳ ಕಾರ್ಯಕರ್ತರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಚೈತನ್ಯ ಭೀಢೆ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *