Published On: Sun, Nov 1st, 2020

ಬಂಟ್ವಾಳದ ಕುವರಿ ಕ್ರೀಡಾರತ್ನ ಪ್ರಶಸ್ತಿಗೆ ಆಯ್ಕೆ

ಬಂಟ್ವಾಳ :   ತಾಲೂಕಿನ ಕಡೇಶ್ವಾಲ್ಯ ಗ್ರಾಮದ ನಿವಾಸಿ ಜಯಲಕ್ಷೀ.ಜಿ. ಅವರು ೨೦೧೭ನೇ ಸಾಲಿನ ಕ್ರೀಡಾರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿರುವ ಅವರು ಪ್ರಸ್ತುತ ಅದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬಾಲ್ ಬಾಡ್ಮಿಂಟನ್ ಕೋಚಿಂಗ್ ನೀಡುತ್ತಿದ್ದಾರೆ. IMG-20201101-WA0058

ಕಡೇಶ್ವಾಲ್ಯ ಪೆರ್ಲಾಪು ಗಾಣದಕೊಟ್ಯ ನಿವಾಸಿ ದಿ| ವಿಶ್ವನಾಥ ಸಪಲ್ಯ-ರೇವತಿ ದಂಪತಿಯ ಪುತ್ರಿಯಾಗಿರುವ ಇವರು ಕಡೇಶ್ವಾಲ್ಯ ಸರಕಾರಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಪೂರ್ಣಗೊಳಿಸಿ, ಬಳಿಕ ಆಳ್ವಾಸ್‌ನಲ್ಲಿ ಪಿಯು ಉಚಿತ ಶಿಕ್ಷಣ ಪಡೆದಿರುತ್ತಾರೆ. ಅದೇ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನೂ ಪೂರ್ಣಗೊಳಿಸಿರುತ್ತಾರೆ.

IMG-20201101-WA0059
ತನ್ನ ಕೋಚ್ ಪ್ರವೀಣ್ ಕುಮಾರ್ ಅವರಿಂದ ಬಾಲ್ ಬ್ಯಾಡ್ಮಿಂಟನ್ ಕಲಿತು ರಾಷ್ಟ್ರ ಮಟ್ಟದ ಕ್ರೀಡಾಪಟುವಾಗಿ ಕರ್ನಾಟಕ ತಂಡದ ನಾಯಕಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ರಾಷ್ಟçಮಟ್ಟದಲ್ಲಿ ನಾಲ್ಕು ಬಾರಿ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿಯನ್ನೂ ಪಡೆದಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter