ಬಂಟ್ವಾಳ: ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾ.ಪಂ.ವ್ಯಾಪ್ತಿ ಯ ಮುನ್ನಲಾಯಿಪದವು- ಪಟ್ಲಕೆರೆ- ಬೀಯಪಾದೆ ರಸ್ತೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವಜ್ಞ ಪಟ್ಲಕೆರೆ ದಿ. ನಾರಾಯಣ ಶಾಂತಿ ರಸ್ತೆ ಎಂದು ನಾಮಕರಣಗೊಳಿಸಲಾಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ನಾಮಫಲಕವನ್ನು ಅನಾವರಣಗೊಳಿಸಿ ರಸ್ತೆಯನ್ನು ಲೋಕಾರ್ಪಣೆ ಗೊಳಿಸಿದರು. ಕಾರ್ಯಕ್ರಮಕ್ಕೆ ಮುನ್ನ ಮುನ್ನಲಾಯಿಪದವು ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ದೇವಸ್ಥಾನದ ವತಿಯಿಂದ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಅವರನ್ನು ಗೌರವಿಸಿ, ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ದಿ.ನಾರಾಯಣ ಶಾಂತಿ ಅವರ ಪುತ್ರ ಶಶಿಧರ ಬಂಗೇರ ಪಟ್ಲಕೆರೆ, ಸರಪಾಡಿ ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ, ನಿಕಟಪೂರ್ವ ಉಪಾಧ್ಯಕ್ಷ ದಯಾನಂದ ಶೆಟ್ಟಿ ಮುನ್ನಲಾಯಿ, ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಶಾಂತಿ ಬಡ್ಲಾಂಗುತ್ತು, ಬಂಟ್ವಾಳ ಬಿಜೆಪಿ ಪ್ರ.ಕಾರ್ಯದರ್ಶಿ ಡೊಂಬಯ ಅರಳ, ಪ್ರಮುಖರಾದ ವರದರಾಜ ಬಂಗೇರ ಅಣಜೆ, ಪ್ರಕಾಶ್ ಅಂಚನ್, ಚಿದಾನಂದ ರೈ, ಎನ್. ಧನಂಜಯ ಶೆಟ್ಟಿ, ಶಾಂತಪ್ಪ ಹಟದಡ್ಕ, ಸುರೇಶ್ ಮೈರ, ಸಾಯಿ ಶಾಂತಿ ಕೋಕಲ,ನವೀನ್ ಶಾಂತಿ, ಪುರುಷೋತ್ತಮ ಪೂಜಾರಿ ಮಜಲು,ನಾಣ್ಯಪ್ಪ ಪೂಜಾರಿ, ಪ್ರೇಮಾ,ಜಯರಾಮ ಅಡಪ್ಪ ಮತ್ತಿತರರು ಉಪಸ್ಥಿತರಿದ್ದರು.
