ಬಂಟ್ವಾಳ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ರಿಕ್ಷಾ ಚಾಲಕ ನೇತ್ರಾವತಿ ವೀರ ಅಬ್ದುಲ್ ಸತ್ತಾರ್ ಗೂಡಿನಬಳಿ ಇವರನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮತ್ತು ಬಂಟ್ವಾಳ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಶನಿವಾರ ರಿಕ್ಷಾ ನಿಲ್ದಾಣದಲ್ಲೇ ಸ್ಮಾನಿಸಿ ಗಮನ ಸೆಳೆದಿದ್ದಾರೆ.
ಈಗಾಗಲೇ ನೇತ್ರಾವತಿ ನದಿಯಲ್ಲಿ ಮುಳುಗುತ್ತಿದ್ದ ಸುಮಾರು 40 ಮಂದಿಯ ಜೀವ ರಕ್ಷಣೆ ಮಾಡುವಲ್ಲಿ ಸತ್ತಾರ್ ಗೂಡಿನಬಳಿ ಜನ ಮನ್ನಣೆ ಗಳಿಸಿದ್ದಾರೆ. ಪ್ರಾಮಾಣಿಕ ರಿಕ್ಷಾ ಚಾಲಕರಾಗಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಮುಖರಾದ ಅಬ್ದುಲ್ ಹಮೀದ್, ರಮೇಶ್ ಶೆಟ್ಟಿ ಮಜಲೋಡಿ, ಎಚ್ಕೆ ನೈನಾಡ್ ಮತ್ತಿತರರು ಇದ್ದರು.
