ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಭಜರಂಗದಳ  ಪರಶುರಾಮ ಶಾಖೆ ಬಂಟ್ವಾಳ  ನಗರವತಿಯಿಂದ  ಭಾರತ ಮಾತಾ ಪೂಜಾ ಹಾಗೂ ಸತ್ಸಂಗ  ಕಾರ್ಯಕ್ರಮ ಬಿ.ಸಿ.ರೋಡಿಗೆ ಸಮೀಪದ ಗಾಣದಪಡ್ಪು  ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಿತು.      IMG-20201026-WA0089

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಮುಖರಾದ  ಸರಪಾಡಿ ಅಶೋಕ್ ಶೆಟ್ಟಿ  ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಭಾರತ ಮಾತಾ ಪೂಜೆಯ  ಮಹತ್ವ ಮತ್ತು ಸಂಘಟನೆ ಯಲ್ಲಿದ್ದು ಸಾಮಾಜಿಕ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎಂಬುದನ್ನು ವಿವರಿಸಿದರು. ವೇದಿಕೆಯಲ್ಲಿ ಬಜರಂಗದಳದ ಜಿಲ್ಲಾ  ಪ್ರಮುಖ್ ಗುರುರಾಜ್ ಬಂಟ್ವಾಳ ,ಶಿವ ಪ್ರಸಾದ್ ತುಂಬೆ,  ಸಂಯೋಜಕರು,  ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡ ಮತ್ತು  ಪ್ರಖಂಡ ಸಮಿತಿಯ ವಿವಿಧ ಜವಾಬ್ಧಾರಿಯ ಪ್ರಮುಖರು  ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪರಶುರಾಮ ನಗರ  ಶಾಖೆಯ  ಕಾರ್ಯಕರ್ತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *