ಬಂಟ್ವಾಳ: ಬಂಟ್ವಾಳ ತಾಲೂಕಿನ  ಚಿಣ್ಣರಲೋಕ ಮೋಕೆದ ಕಲಾವಿದೆರ್  ಸೇವಾ ಟ್ರಸ್ಟ್ ಆಶ್ರಯದಲ್ಲಿ  ಐಸಿರಿ ಕರಾವಳಿಯ ಸೊಬಗು ವೀಡಿಯೋ ಅಲ್ಬಂನ ಹಾಡುಗಳ ಟೀಸರ್ ಚಿತ್ರತುಣುಕು ಬಿಡುಗಡೆಯ ಸರಳ ಸಮಾರಂಭ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆಯಿತು.IMG_20201030_163132

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್  ಉಳಿಪಾಡಿಗುತ್ತು ಅವರು ಕಾರ್ಯಕ್ರಮ ಉದ್ಘಾಟಿಸಿ, ಟೀಸರ್ ಬಿಡುಗಡೆಗೊಳಿಸಿ ಮಾತನಾಡಿ ತುಳು ಮಾತ್ರವಲ್ಲ ಕನ್ನಡದಲ್ಲು ಆಲ್ಬಂ ತಯಾರಾಗುವ ಮೂಲಕ ರಾಜ್ಯಕ್ಕೆ ಪಸರಿಸುವಂತಾಗಲಿ ಎಂದು ಆಶಿಸಿದರಲ್ಲದೆ ಬಂಟ್ವಾಳದಂತ ಸಣ್ಣ ಪ್ರದೇಶದಲ್ಲಿ  ಎಳೆ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಚಿಣ್ಣರಲೋಕದ ಸಂಚಾಲಕ ಮೋಹನ್ ದಾಸ್ ಅವರಿಂದ ನಡೆಯುತ್ತಿರುವುದು ಅಭಿನಂದನೀಯವಾಗಿದೆ ಎಂದರು.

ಟ್ರಸ್ಟ್ ನಗೌರವಾಧ್ಯಕ್ಷ,ನ್ಯಾಯವಾದಿ ಜಯರಾಮ ರೈ,ಗೌರವ ಸಲಹೆಗಾರ,ಯಕ್ಷಗಾನ ಕಲಾವಿದ ಸರಪಾಡಿ ಆಶೋಕ್ ಶೆಟ್ಟಿ , ರಂಗಭೂಮಿ ಕಲಾವಿದ ದಯಾನಂದರೈ ಬೆಟ್ಟಂಪಾಡಿ, ಬಾಲಚಿತ್ರನಟಿ ದೀಕ್ಷಾ ಡಿ. ರೈ,ಸಂಗೀತ ನಿರ್ದೇಶಕ ಭಾಸ್ಕರ್ ರಾವ್ ಬಿ.ಸಿ.ರೋಡ್,ಉಪನ್ಯಾಸಕ ತೀರ್ಥಪ್ರಸಾದ್ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.ಇದೇ ವೇಳೆ  ಕಂಠದಾನ ಕಲಾವಿದ ,ನಿರ್ದೇಶಕ  ರಮೇಶ್ ಶಿವಪುರ ಮುಂಬೈ ಅವರನ್ನು ಸನ್ಮಾನಿಸಲಾಯಿತು.ಟ್ರಸ್ಟ್ ನ ಸಂಚಾಲಕ ಮೋಹನದಾಸ್ ಕೊಟ್ಟಾರಿ ಸ್ವಾಗತಿಸಿದರು. ಸೌಮ್ಯ ವಂದಿಸಿದರು.ಕಲಾವಿದ ಎಚ್.ಕೆ.ನಯನಾಡ್ ಕಾರ್ಯ ಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *