ಬಂಟ್ವಾಳ: ಮುಂಬರುವ ಗ್ರಾಮ ಪಂಚಾಯತ್  ಚುನಾವಣೆಯಲ್ಲಿ ಬಂಟ್ವಾಳ ಮಂಡಲ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ್ ಗಳ ಆಡಳಿತವು ಬಿ.ಜೆ.ಪಿ.ಬೆಂಬಲಿತರು ಪರವಾಗಿ ಬರುವ ನಿಟ್ಟಿನಲ್ಲಿ  ಮಹಿಳಾ ಕಾರ್ಯಕರ್ತರು ಗರಿಷ್ಠ ಮಟ್ಟದಲ್ಲಿ ಶ್ರಮಿಸುವಂತೆ   ಬಂಟ್ವಾಳ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿ ಹರಿಣಿವಿಜಯೇಂದ್ರ  ಕರೆ ನೀಡಿದ್ದಾರೆ.  ಬಿ .ಸಿ.ರೋಡ್ ನ ಗೀತಾಂಜಲಿ ಸಭಾ ಭವನದಲ್ಲಿ ಬಂಟ್ವಾಳ ಮಂಡಲ ಬಿ.ಜೆ.ಪಿ.ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ರಾಜ್ಯ ಮತ್ತು ಕೇಂದ್ರ ಸರಕಾರ ಜಾರಿಗೆ ತಂದಿರುವ ಜನಪರ ಕಾರ್ಯಕ್ರಮಗಳನ್ನು ಮನೆ,ಮನೆಗೆ ತಿಳಿಹೇಳುವ ಮೂಲಕ ಪಕ್ಷವನ್ನು ಬಲಪಡಿಸಬೇಕು ಎಂದರು.IMG-20201027-WA0028

ಸಂಪನ್ಮೂಲ ವ್ಯಕ್ತಿಯಾಗಿ ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಕ ವೇದಾನಂದ ಕಾರಂತ್ ಮಾತನಾಡಿ ಭಾರತದಲ್ಲಿ ಬ್ರಿಟಿಷರ ಕಾಲದಿಂದಲೂ ಹಾಗೂ ನಂತರದ ಸಮಯದಲ್ಲಿ ಶಿಕ್ಷಣದ ಪದ್ದತಿಯಲ್ಲಿ ಪರಿಪಕ್ವತೆಯ ಸಮರ್ಪಕವಾಗದ ನೀತಿಗಳಿಲ್ಲದೆ ಶಿಕ್ಷಣ ವ್ಯವಸ್ಥೆ ಗೊಂದಲದಿಂದ ಕೂಡಿತ್ತು.ವಿದ್ಯಾರ್ಥಿಗಳನ್ನು ಕೇವಲ ಅಂಕಗಳು ಮತ್ತು ಪರೀಕ್ಷೆಗಳಿಗೆ ಮಾತ್ರ ಸೀಮಿತ ಗೊಳಿಸಲಾಗಿತ್ತು.ಇದನ್ನು ಮನಗಂಡು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ನೇತೃತ್ವದ ಕೇಂದ್ರ ಸರಕಾರ ಹಿಂದಿನ ಅಸಂಬದ್ಧ ಶಿಕ್ಷಣ ಪದ್ದತಿ ಬದಲಿಗೆ ಇಡೀ ದೇಶದಲ್ಲಿಯೇ ಏಕರೂಪ ಶಿಕ್ಷಣ  ನೀತಿಯನ್ನು ಜಾರಿಗೊಳಿಸುವುದರಿಂದ ಮುಂದಿನ ನವ ಭಾರತದ ಶೈಕ್ಷಣಿಕ ಇತಿಹಾಸವೇ ಬದಲಾಗುತ್ತದೆ ‌ಎಂದು ಹೇಳಿದರು.

ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ಯನ್ನು ಮಂಡಲ ಅಧ್ಯಕ್ಷರಾದ ಭಾರತಿ ಚೌಟ ವಹಿಸಿದ್ದರು.ವೇದಿಕೆಯಲ್ಲಿ  ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿ ಮಂದಾರತಿ ಶೆಟ್ಟಿ ಸಿದ್ದಕಟ್ಟೆ, ಜಿಲ್ಲಾ ಮಹಿಳಾ ಮೋರ್ಚಾದ ಸದಸ್ಯೆ  ನಳಿನಿ.ಬಿ.ಶೆಟ್ಟಿ. ಮತ್ತಿತರರು ಉಪಸ್ಥಿತರಿದ್ದರು.ಬಂಟ್ವಾಳ ಮಂಡಲ ಬಿ.ಜೆ.ಪಿ.ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಉಪಸ್ಥಿತರಿದ್ದರು.ಇದೇವೇಳೆ ಸಂಪನ್ಮೂಲ ವ್ಯಕ್ತಿಯಾಗಿದ್ದ ವೇದಾನಂದ ಕಾರಂತ್ ರವರಿಗೆ ಮಹಿಳಾ ಮೋರ್ಚಾದ ವತಿಯಿಂದ  ಸ್ಮರಣಿಕೆ ನೀಡಿ ಅಭಿನಂದಿಸಿದರು.
ಬಂಟ್ವಾಳ ಮಂಡಲ ಮಹಿಳಾ ಮೋರ್ಚಾದ ಪ್ರದಾನ ಕಾರ್ಯದರ್ಶಿ ಸೀಮಾ ಮಾಧವ   ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.  .ಮಂಡಲ ಮಹಿಳಾ ಮೋರ್ಚಾದ  ಪ್ರದಾನ ಕಾರ್ಯದರ್ಶಿ ಶ್ರೀಲತಾ ಶೆಟ್ಟಿ ವಂದಿಸಿದರು.

By suddi9

Leave a Reply

Your email address will not be published. Required fields are marked *