ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ನವರಾತ್ರಿಯ ಪ್ರಯುಕ್ತ ಶ್ರೀ ದುರ್ಗಾ ನಮಸ್ಕಾರ ಪೂಜೆ ಶ್ರದ್ಧಾಭಕ್ತಿಯಿಂದ ಮಾಗಣೆಯ ತಂತ್ರಿಗಳಾದ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.
ಜಯಶಂಕರ ಬಾಸ್ರೀತ್ತಾಯ, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಶಶಿರಾಜ ರಾವ್ ,ಕೆ ಸುಬ್ರಾಯ ಕಾರಂತ, ದೇವಿಪ್ರಸಾದ ಪೂಂಜಾ, ದೇವಪ್ಪ ಮಡಿವಾಳ, ಯನ್. ಕೆ. ಶಿವ, ಚಿತ್ರಾ ಎಸ್ ರೈ, ಹರಿಪ್ರಸಾದ್ ಭಂಡಾರಿ, ಕೃಷ್ಣಭಟ್, ಧನೇಶ್ವರ ರಾವ್, ಉಮೇಶ ರಾವ್, ಕೃಷ್ಣ ಕಾರಂತ ಮೊದಲಾದವರು ಉಪಸ್ಥಿತರಿದ್ದರು
