ಬಂಟ್ವಾಳ: ಬಿ ಕಸ್ಬಾ ಗ್ರಾಮದ ನೇರಂಬೋಳು ಎಂಬಲ್ಲಿ ಮಳೆಯಿಂದ ಹಾನಿಗೊಳಗಾದ ಸುನಂದಾ ಪೂಜಾರಿ ಯವರ ಮನೆಗೆ ಮಾಜಿ ಸಚಿವರು ಬಿ ರಮಾನಾಥ ರೈ ಯವರು ಭೇಟಿ ನೀಡಿ ಪರಿಶೀಲಿಸಿದರು. ಇಲಾಖಾ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸೂಕ್ತ ಪರಿಹಾರ ಒದಗಿಸುವಂತೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ದಯಾನಂದ್ ಕುಲಾಲ್ ನೇರಂಬೋಳು ಉಪಸ್ಥಿತರಿದ್ದರು.
