ಕೋಲಾರ: ಅರ್ಥಪೂರ್ಣವಾದ ಹುಟ್ಟುಹಬ್ಬದಆಚರಣೆಯೊಂದು ಬೀರಂಡಹಳ್ಳಿ ಶ್ರೀ ಸಾಯಿಜ್ಯೋತಿ ವೃದ್ಧಾಶ್ರಮದಲ್ಲಿ ಸರಳವಾಗಿ ನೆರವೇರಿತು. ಪ್ರಾಂಶುಪಾಲರು ಹಾಗೂ ರೋಟರಿಕೋಲಾರಜಿಲ್ಲಾಉಪಾಧ್ಯಕ್ಷರೂಆಗಿರುವ ಹೆಚ್.ರಾಮಚಂದ್ರಪ್ಪಅವರ ಹುಟ್ಟುಹಬ್ಬವನ್ನು, ವೃದ್ಧಾಶ್ರಮದ ಅಶಕ್ತ ಹಿರಿಯ ಜೀವಿಗಳಿಗೆ ಅಕ್ಕಿ, ದಿನಸಿ, ಹಣ್ಣುಹಂಪಲು ಮತ್ತು ಹಾಲು ವಿತರಣೆಜೊತೆಗೆ,ಕೆ.ಜಿ.ಎಫ್‍ನಲ್ಲಿಕೊರೋನಾ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸಿದವರನ್ನು ಸನ್ಮಾನಿಸುವುದರೊಂದಿಗೆ ಈ ಹುಟ್ಟುಹಬ್ಬವನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿಆಚರಿಸಲಾಯಿತು.

DINASI VITHARANE (4)
ಈ ಸಂದರ್ಭದಲ್ಲಿರೋಟರಿಕೋಲಾರ ಸಂಸ್ಥೆಯ ವಲಯರಾಜ್ಯಪಾಲ ಟಿ.ಎಸ್.ರಾಮಚಂದ್ರೇಗೌಡ, ಸತ್ಯಜ್ಯೋತಿಆಶ್ರಮದ ಕಾರ್ಯದರ್ಶಿ ಸುಲೋಚನಾ, ಎಲ್‍ಐಸಿ ಅಧಿಕಾರಿ ಶೈಲಜರಾಮಚಂದ್ರಪ್ಪ, ಅನಿಕೇತನ ಸಾಂಸ್ಕøತಿಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮುನಿಕೃಷ್ಣಪ್ಪ, ಕೆ.ಜಿ.ಎಫ್ ನಗರಸಭೆಯ ವ್ಯವಸ್ಥಾಪಕಜಯರಾಮ್, ಪ್ರಾಂಶುಪಾಲ ರಾಜ್‍ಕುಮಾರ್, ರೋಟೋರಿಯನ್‍ರಾಮಚಂದ್ರೇಗೌಡ, ಡಾ.ರಾಜಮೋಹನ್‍ಗೌಡ, ಡಾ.ಯುಗಶ್ರೀ, ಕೊರೋನಾ ವಾರಿಯರ್‍ಗಳಾದ ಭಾರತಿ, ಸುನೀತ ಹಾಗೂ ದೀಪಿಕಾ, ಶೈಲಜ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *