ಬಂಟ್ವಾಳ: ಮಂಗಳೂರು ಕ್ಷೇತ್ರದ ತುಂಬೆ,ಮೇರಮಜಲು,ಕೊಡ್ಮಾಣ್, ಫರಂಗಿಪೇಟೆ ಹೊರತುಪಡಿಸಿ ಉಳಿದ ಗ್ರಾಮ ಸೇರಿಸಿಕೊಂಡು ಶೀಘ್ರದಲ್ಲಿಯೇ ನೂತನವಾಗಿ ಉಳ್ಳಾಲ ತಾಲೂಕು ಅಸ್ತಿತ್ವಕ್ಕೆ ಬರಲಿದ್ದು,ಸಜೀಪ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ. ಸೋಮವಾರ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳತಾಪಂನ ಎಸ್ ಜಿಎಸ್ ವೈ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪದಡಿಯಲ್ಲಿ ಮಳೆಹಾನಿಗೋಳಗಾದ ಸಂತ್ರಸ್ಥರಿಗೆ ಚೆಕ್ ಹಾಗೂ 94ಸಿ ಹಕ್ಕುಪತ್ರ ವಿತರಿಸಿ ಅವರು ಮಾತನಾಡುತ್ತಿದ್ದರು. 
ಹರೇಕಳದಿಂದ ಆಡ್ಯಾರನ್ನು ಸಂಪರ್ಕಿಸಲು ನೇತ್ರಾವತಿ ನದಿಗೆ ಸೇತುವೆ ನಿರ್ಮಾಣದ ಕಾರ್ಯ ಆರಂಭವಾಗಿದ್ದು, ಆದೇಮಾದರಿಯಲ್ಲಿ ತುಂಬೆಯಿಂದ ಸಜೀಪ ಗ್ರಾಮಕ್ಕೆ ಸಂಪರ್ಕಿಸಲು ಸೇತುವೆ ನಿರ್ಮಾಣದ ಪ್ರಸ್ತಾಪವನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದ ಶಾಸಕರು ಸಜೀಪದಿಂದ ಉಳ್ಳಾಲ ಭಾಗಕ್ಕೆ ಕುಡಿಯುವ ನೀರು ಪೂರೈಕೆಗೂ 258 ಕೋ.ರೂ.ವಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು,ಈ ಮೂಲಕ ಕುಡಿಯುವ ಇಲ್ಲಿನ ನೀರಿನ ಸಮಸ್ಯೆಯು ಬಗೆಹರಿಯಲಿದೆ ಎಂದರು. 
ಮಂಗಳೂರು ಕ್ಷೇತ್ರಕ್ಕೊಳಪಟ್ಟ ಬಂಟ್ವಾಳ ತಾಲೂಕಿನಲ್ಲಿ 3500 ಸಾವಿರ ಹಕ್ಕುಪತ್ರ ಅರ್ಜಿಯಲ್ಲಿ 2000 ಕ್ಕು ಅಧಿಕ ಮಂದಿಗೆ ಹಕ್ಕು ಪತ್ರ ವಿತರಿಸಲಾಗಿದೆ.ಈ ತಿಂಗಳ ಅಂತ್ಯದೊಳಗೆ ಬಾಕಿ ಉಳಿದಿರುವ ಫಲಾನಿಭವಿಗಳಿಗೆ ಹಕ್ಕುಪತ್ರ ವಿತರಿಸಿ ಶೇ.100 ರಷ್ಟು ಹಕ್ಕುಪತ್ರ ವಿತರಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಸಭಾಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಅಬ್ಬಾಸ್ ಅಲಿ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಸುಮಾರು 17 ಂಮದಿಗೆ ಹಕ್ಕುಪತ್ರ ಹಾಗೂ 12 ಮಂದಿಗೆ ಒಟ್ಟು 3.82 ಲಕ್ಷ.ರೂ.ಪ್ರಾಕೃತಿಕ ವಿಕೋಪದಡಿ ಪರಿಹಾರ ಚೆಕ್ ವಿತರಿಸಲಾಯಿತು.ಗ್ರಾಮ ಕರಣಿಕರಾದ ನವ್ಯ,ಪ್ರಕಾಶ್,ಗ್ರಾಮಸಹಾಯಕ ಶೀತಲ್,ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್,ಮಾಜಿ ಗ್ರಾಪಂ ಅಧ್ಯಕ್ಷರಾದ ರಜಾಕ್ ಕುಕ್ಕಾಜೆ,ಮುರಳಿ,ಮಾಜಿ ಜಿಪಂ ಸದಸ್ಯ ಫಾರೂಕ್ ಫರಂಗಿಪೇಟೆ ಮೊದಲಾದವರಿದ್ದರು. 
ಕೊರೋನ ನಿಯಮ ಪಾಲಿಸಿ :
ಮುಂದಿನ ಡಿಸೆಂಬರ್ ತಿಂಗಳವರೆಗೆ ಕೊರೋನಾ ಮಹಾಮಾರಿಯ ಅಟ್ಟಹಾಸ ಇರಲಿದ್ದು, ತಾನು ಮಾಸ್ಕ್ ಹಾಕಿಲ್ಲ ಎಂದು ಅಚ್ಚರಿಪಡಬೇಡಿ, 20 ದಿನ ಅಥವಾ ತಿಂಗಳಿಗೊಮ್ಮೆ ಕರೋನಾ ಪರೀಕ್ಷೆ ಗೊಳಪಡುತ್ತಿದ್ದೆನೆ . ತಾವು ಕೊರೋನ ನಿಯಮ ಪಾಲಿಸಿ,ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಹಿರಿಯರು,ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ ಯಾವುದೇ ಕಾರಣಕ್ಕು ನಿರ್ಲಕ್ಷ್ಯಸದಿರಿ ಎಂದು ಶಾಸಕ ಯು.ಟಿ.ಖಾದರ್ ಸಲಹೆ ನೀಡಿದರು.ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ ,ವಂದಿಸಿದರು.
