ಬಂಟ್ವಾಳ: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಬಂಟ್ವಾಳಕ್ಕೆ ಸರಕಾರದ ವಿವಿಧ ಇಲಾಖೆಗಳಿಂದ ಗರಿಷ್ಠ ಪ್ರಮಾಣದಲ್ಲಿ ಅನುದಾನ ಬಂಟ್ವಾಳ ಕ್ಷೇತ್ರಕ್ಕೆ ಲಭ್ಯವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಅರಳ ಗ್ರಾ.ಪಂ ವ್ಯಾಪ್ತಿಯಲ್ಲಿ 2.70 ಕೋ.ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದ ಅವರು ವಿಶೇಷ ಮುತುವರ್ಜಿ ಮತ್ತು ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದರು .
ಇದೇ ವೇಳೆ 20 ಲಕ್ಷದಲ್ಲಿ ಅಲ್ಮುಡೆ ರಸ್ತೆ , 25 ಲಕ್ಷ ರೂ. ವೆಚ್ಚದಲ್ಲಿ ಗರುಡ ಮಹಾಕಾಳಿ ದೇವಸ್ಥಾನದ ರಥಬೀದಿ 25ಲಕ್ಷ ರೂ.ವೆಚ್ಚದಲ್ಲಿ ಕಲ್ಲೊಟ್ಟೆ ಸೇತುವೆ 4 ಲಕ್ಷ ರೂ.ವೆಚ್ಚದಲ್ಲಿ ಹಿಂದೂ ರುದ್ರ ಭೂಮಿ,15 ಲ.ರೂ.ವೆಚ್ಚದಲ್ಲಿ ಪಾಚಿಲೋಡಿ ರಸ್ತೆ, 5 ಲಕ್ಷ ರೂ.ವೆಚ್ಚದಲ್ಲಿ ಅರಳ ಕುಟ್ಟಿಕಳ ರಸ್ತೆ ,10 ಲಕ್ಷ ರೂ . ವೆಚ್ಚದಲ್ಲಿ ಬೊಳ್ಳಾಲು ಗುಡ್ಡೆ ರಸ್ತೆ 40ಲಕ್ಷ ರೂ.ವೆಚ್ಚದಲ್ಲಿ ಇರ್ನಿ ಕುದ್ರು ಕಿಂಡಿ ಅಣೆಕಟ್ಟು ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಹಾಗೆಯೇ ಪೂರ್ಣಗೊಂಡ ಅಭಿವೃದ್ಧಿ ಕಾಮಗಾರಿಯನ್ನು ಶಾಸಕರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ತುಂಗಪ್ಪ ಬಂಗೇರಾ,ಮಾಜಿ ಪಂಚಾಯತ್ ಅಧ್ಯಕ್ಷೆ ತುಂಗಮ್ಮ,ಪ್ರಮುಖರಾದ ಜಗದೀಶ ಆಳ್ವ,ರಂಜಿನಿ,ಲಕ್ಷ್ಮಿಧರ ಪೂಜಾರಿ,ಲಕ್ಷ್ಮಿಧರ ಶೆಟ್ಟಿ,ರಂಜನ್,ಡೊಂಬಯ ಅರಳ,ಉಮೇಶ್ ಅರಳ,ಪುರುಷೋತ್ತಮ ಶೆಟ್ಟಿ ವಾಮದಪದವು,ಗಣೇಶ್ ರೈ ಮಾಣಿ,ಪ್ರಸನ್ನ ಶೆಟ್ಟಿ ,ಬಾಬು ಶೇಖ,ಯೋಗೀಶ್ ಅರಳ,ಅಶ್ವಥ್ ಅರಳ,ಶಶಿಧರ ಶೆಟ್ಟಿ,ರಾಜೇಂದ್ರ ಕರ್ಪೆ ಉಪಸ್ಥಿತರಿದ್ದರು.
