ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಬಂಟ್ವಾಳ ವಲಯದ 2020-21 ಸಾಲಿನ ಸದಸ್ಯತ್ವ ನವೀಕರಣ ಕಾರ್ಯಕ್ರಮ ಬಿ.ಸಿ.ರೋಡಿನ  ಪ್ರೀತಿ ಸಭಾಂಗಣದಲ್ಲಿ ನಡೆಯಿತು. ಎಸೋಸಿಯೇಶನ್ ನ   ಜಿಲ್ಲಾಧ್ಯಕ್ಷರಾದ ಶ್ರೀ ಶ್ರೀಧರ್ ಶೆಟ್ಟಿಗಾರ್    ಕಾಾರ್ಯಕ್ರಮ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಈ ಸಾಲಿನ  ಎಸ್ . ಎಸ್ .ಎಲ್ .ಸಿ ಯಲ್ಲಿ ಉತ್ತಮ ಅಂಕ ಪಡೆದ ವಲಯದ ಸದಸ್ಯರ ಮಕ್ಕಳಾದ ಹರೀಶ್ ಕುಂದರ್ ಮತ್ತು ಜಯಲಕ್ಷ್ಮಿ ದಂಪತಿಯ ಮಗಳಾದ ಅನನ್ಯ ಜೆ.ಕುಂದರ್(91.52℅)  ಅಮಿತ ಮತ್ತು ಶಿವರಾಯ ನಾಯಕ್ ದಂಪತಿಯ ಮಗಳಾದ ಅನುಷ.ಯಸ್ (89.44℅) ಇವರನ್ನು ಗೌರವಿಸಲಾಯಿತು.

PSX_20201009_204041ವಲಯದ ಅಧ್ಯಕ್ಷರಾದ ಕುಮಾರಸ್ವಾಮಿ ಕನ್ಯಾನ,,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಅಡ್ಯಾರ್,ಜಿಲ್ಲಾ ಉಪಾಧ್ಯಕ್ಷ ದೇವರಾಜ್ ಶೆಟ್ಟಿ, ಎಸ್.ಕೆ.ಪಿ.ವಿವಿದೊದ್ದೇಶ ಬ್ಯಾಂಕಿನ ನಿರ್ದೇಶಕರಾದ ಹರೀಶ್ ರಾವ್,ವಲಯದ ಪ್ರಧಾನ ಕಾರ್ಯದರ್ಶಿ ವಿಕೇಶ್ ,ಕೋಶಾಧಿಕಾರಿ ವಿಕ್ರಂ ಫರಂಗಿಪೇಟೆ, ಮಾಜಿ ಅಧ್ಯಕ್ಷ ಹರೀಶ್ ಮಾಣಿ, ವಲಯದ ಉಪಾಧ್ಯಕ್ಷರುಗಳಾದ ಕಿಶೋರ್ ಬಿ.ಸಿ.ರೋಡ್,ರೋಶನ್ ಮೊಗರ್ನಾಡ್,ರವಿ ಕಲ್ಪನೆ  ಹಾಗೂ ವಲಯದ  ಸದಸ್ಯರು ಭಾಗವಹಿಸಿದ್ದರು.ಗೌರವಾಧ್ಯಕ್ಷರಾದ  ಅನಂದ್ ಎನ್. ಸ್ವಾಗತಿಸಿ, ಉಪಾಧ್ಯಕ್ಷ ಕಿಶೋರ್ ಬಿ.ಸಿ.ರೋಡ್   ನಿರೂಪಿಸಿದರು,ವಿಕ್ರಂ ವಂದಿಸಿದರು.

By suddi9

Leave a Reply

Your email address will not be published. Required fields are marked *