ಲಯನ್ಸ್ ಕ್ಲಬ್ ಹಾಗೂ ಯೆನಪೋಯ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಅ ೧೦ರಂದು ಶನಿವಾರ ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧ರ ತನಕ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ  ಉಚಿತ ಆಯುರ್ವೇದಿಕ್ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ  ಕೃಷ್ಣಶ್ಯಾಮ್ ತಿಳಿಸಿದ್ದಾರೆ.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಬೆಳಿಗ್ಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲ ಲಯನ್ ಡಾ. ಗೀತ್‌ಪ್ರಕಾಶ್ ಶಿಬಿರವನ್ನು ಉದ್ಘಾಟಿಸಿದ್ದಾರೆ.    ಲಯನ್ಸ್‌ನ ಪ್ರಥಮ ಜಿಲ್ಲಾ ಉಪರಾಜ್ಯಪಾಲ ಲ. ವಸಂತ ಕುಮಾರ್ ಶೆಟ್ಟಿ, ಯೇನಪೋಯ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಗುರುರಾಜ್ ಎಚ್. ಭಾಗವಹಿಸಲಿದ್ದಾರೆ ಎಂದರು‌
ಬಿ.ಸಿ.ರೋಡಿನಲ್ಲಿ ಪ್ರಪ್ರಥಮ ಬಾರಿಗೆ ಯೇನಪೋಯ ಆಯುರ್ವೇದಿಕ್ ಕಾಲೇಜಿನ ಆಯುರ್ವೇದಿಕ್ ನುರಿತ ತಜ್ಞರಿಂದ ಉಚಿತ ಶಿಬಿರ ನಡೆಯುತ್ರಿದ್ದು, ತಪಾಸಣೆಯಾದ ಶಿಬಿರಾರ್ಥಿಗಳಿಗೆ ಉಚಿತ ಔಷಧಿ ವಿತರಿಸಲಾಗುವುದು, ಇದೇ ವೇಳೆ ನವದೆಹಲಿ ಆಯುಷ್ ಮಂತ್ರಾಲಯದಿಂದ ನಿರ್ದೇಶಿಸಲ್ಪಟ್ಟ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ “ಆಯುಷ್ ಕ್ವಾಥ ಚೂರ್ಣ”ವನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು ಎಂದರು. 
 
ಇತಿಹಾಸದಲ್ಲಿ ಪ್ರಥಮ ಸ್ಥಾನ:   ಲಯನ್ಸ್ ಕ್ಲಬ್ ಬಂಟ್ವಾಳ 2019-20 ನೇ ಸಾಲಿನಲ್ಲಿ ನಡೆದ ವಿವಿಧ ಸೇವಾಕಾರ್ಯ ಹಾಗೂ ಸಮಾಜಮುಖಿ ಕಾರ್ಯಗಳಿಗಾಗಿ ಅತ್ಯತ್ತಮ ಕ್ಲಬ್ ಪ್ರಶಸ್ತಿ ಗೆದ್ದು ಕೊಂಡಿದೆ ಎಂದು ಕ್ಲಬ್ ನ ಮಾಜಿ ಅಧ್ಯಕ್ಷ ಜಯಂತ್ ಶೆಟ್ಟಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.ಲಯನ್ಸ್ ನ ೪ಕಂದಾಯ ಜಿಲ್ಲೆಗಳ ಪೈಕಿ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಬಂಟ್ವಾಳ ಲಯನ್ಸ್ ಕ್ಲಬ್ ಇತಿಹಾಸದ 48 ವರ್ಷ ಗಳಲ್ಲಿ ಪ್ರಥಮಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಭಾಗವಹಿಸಿದ್ದ ತ್ರಿನೇತ್ರ ನಾಳೆಯ ಭರವಸೆಯ ಕಣ್ಣುಗಳು ಮತ್ತು ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮ ಲಯನ್ಸ್ ಕ್ಲಬ್ ನ ಜನಪ್ರಿಯತೆ ಹೆಚ್ಚಿಸಿತ್ತು ಎಂದು ಹೇಳಿದರು. ಅಲ್ಲದೆ ಬಂಟ್ವಾಳ ಲಯನ್ಸ್ ಕ್ಲಬ್‌ನ ವತಿಯಿಂದ ವಿವಿಧ ವೈದ್ಯಕೀಯ ಶಿಬಿರ ಸಹಿತ ಜನಪರ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ನಿರ್ದೇಶಕ ಲಕ್ಷ್ಮಣ್ ಕುಲಾಲ್, ಕಾರ್ಯದರ್ಶಿ ಕೆ.ವೈಕುಂಠ ಕುಡ್ವ,  ಕೋಶಾಧಿಕಾರಿ ದಿಶಾ ಆಶೀರ್ವಾದ್, ಶಿಬಿರದ ಸಂಚಾಲಕ ರಝಾಕ್ ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *