ಕೋಲಾರ:ಸಾಮಾಜಿಕ ಹೊಣೆಗಾರಿಕೆ ಸೇವಾ ಅಡಿಯಲ್ಲಿ ಬೆಂಗಳೂರಿನ ಯು.ಎಸ್.ಟಿಗ್ಲೋಬಲ್ ಕಂಪನಿ ವತಿಯಿಂದಕೋಲಾರದ400 ಮಂದಿ ತ್ರಿಲಿಂಗಿ ಸಮುದಾಯದವರಿಗೆಆಹಾರದ ಕಿಟ್‍ಗಳನ್ನು ವಿತರಿಸಲಾಯಿತು.

ಕೊರೊನ ಸಂಕಷ್ಟದಲ್ಲಿ ಸುಮಾರುಆರು ತಿಂಗಳಿನಿಂದ ಜೀವನೋಪಾಯಕ್ಕಾಗಿ ಪರಿತಪ್ಪಿಸುತ್ತಿದ್ದ ಈ ನಿರ್ಲಕ್ಷಿತ ಸಮುದಾಯದ ಬವಣೆಯನ್ನುಅರಿತಯು.ಎಸ್.ಟಿ. ಗ್ಲೋಬಿಲ್ ಐ.ಟಿಕಂಪನಿಯು, ಈ ರೀತಿ ಸಹಾಯ ಹಸ್ತ ಚಾಚುವ ಮೂಲಕ ಒಂದು ತಿಂಗಳಿಗಾಗುವಷ್ಟು ವಿವಿಧ ಪದಾರ್ಥಗಳ ದಿನಸಿಯನ್ನು ನೀಡಲಾಯಿತು.ಈ ಸಂದರ್ಭದಲ್ಲಿಯು.ಎಸ್.ಟಿ.ಗ್ಲೋಬಲ್ ಕಂಪನಿಯ ಸಿ.ಎಸ್.ಆರ್. ವಿಭಾಗದ ಸ್ಮಿತ, ಲತಾ,ವಿಶ್ವಾಸ್,ಅರವಿಂದ್,ಶಿವಕುಮಾರ್ ಹಾಗೂ ಸಂಗಮ ಮತ್ತು ಸಮ್ಮಿಲನ ಸಂಸ್ಥೆಯ ಪ್ರತಿನಿಧಿ ಅಶ್ವಿನಿ ರಾಜನ್ ಹಾಜರಿದ್ದರು.
