ಬಂಟ್ವಾಳ: ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿದ್ದು,ಯಾವುದೇ ಪರಿಸ್ಥಿತಿಯಲ್ಲಿಯು ಹಿಂದೂ ಸಮಾಜದ ಉದ್ಧಾರಕ್ಕೆ ಸರ್ವಸ್ವವನ್ನೂ ತ್ಯಾಗ ಮಾಡಲು ಸನ್ನದ್ದರಾಗಿರುವ ಯುವಕರು ಅಗತ್ಯವಿದೆ ಎಂದು ವಿಶ್ವಹಿಂದೂ ಪರಿಷತ್ ಪ್ರಾಂತದ ಸಹಕಾರ್ಯದರ್ಶಿ ಕೃಷ್ಣ ಮೂರ್ತಿ ಹೇಳಿದ್ದಾರೆ. ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಭಾನುವಾರ ನಡೆದ ವಿಶ್ವ ಹಿಂದೂ ಪರಿಷತ್ , ಭಜರಂಗದಳ ಬಂಟ್ಚಾಳ ಪ್ರಖಂಡದ ಜವಬ್ದಾರಿ ಯುತ ಕಾರ್ಯಕರ್ತರ ಅಭ್ಯಾಸ ವರ್ಗ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್ , ಭಜರಂಗದಳದ ಮಂಗಳೂರು ವಿಭಾಗ ಸಂಚಾಲಕ ಭುಜಂಗ ಕುಲಾಲ್, ವಿಶ್ವಹಿಂದೂ ಪರಿಷತ್ ಧರ್ಮ ಪ್ರಸಾರಣ ಪ್ರಮುಖ್ ರಾಜರಾಮ್ ನಾಯಕ್ ಸಂಘಟನೆಯ ಉದ್ದೇಶಗಳನ್ನು ವಿವರಿಸಿದರು.
ಸಮಾಜದ ಸ್ವಾಸ್ಥ್ಯ ವನ್ನು ಕಾಪಾಡಲು ಸನ್ನದ್ದರಾಗಿ : ಪ್ರಸಾದ್
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಿ.ಸಿ.ರೋಡಿನ ಯುವ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಅವರು ಸಮಾರೋಪ ಭಾಷಣ ಗೈದರು. ಸಮಾಜದ ಸ್ವಾಸ್ಥ್ಯ ವನ್ನು ಕಾಪಾಡುವ ದೆಸೆಯಲ್ಲಿ ಹಿಂದೂ ಸಮಾಜ ಸನ್ನದ್ದವಾಗಬೇಕು ಸಂಘಟನೆಯ ಕಾರ್ಯಕ್ರಮಗಳು ಅಥವಾ ಜವಾಬ್ದಾರಿಗಳು ಕೇವಲ ಸಾಮಾಜಿಕ ಜಾಲತಾಣಕ್ಕೆ ಮೀಸಲಾಗದೆ ಹಿಂದೂ ಸಮಾಜದ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಅವರು ಹೇಳಿದರು.
ಸಂಘಟನೆಯ ಅನಿವಾರ್ಯತೆಯನ್ನು ಸಂಘಟನೆಯ ಕಾರ್ಯಕರ್ತರು ಯಾವ ರೀತಿ ಅಳವಡಿಸಿಕೊಂಡು ಮುಂದಡಿಯಿಡಬೇಕು ಎಂಬುದರ ಚಿಂತನೆ ಈರೀತಿಯ ಅಭ್ಯಾಸ ವರ್ಗದಲ್ಲಿ ಭಾಗವಹಿಸಿದಾಗ ಮಾತ್ರ ಸಿಗಲು ಸಾಧ್ಯವಾಗುತ್ತದೆ ಎಂದ ಅವರು ಭವಿಷ್ಯದಲ್ಲಿ ದೇಶ ಪರಮವೈಭವಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಹಿಂದೂ ಸಮಾಜ ಕಟಿಬದ್ದರಾಗಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪರ್ಶಾ ಕಲಾಮಂದಿರದ ಮಾಲಕ ಸುಭಾಶ್ಚಂದ್ರ ಜೈನ್ ವಹಿಸಿದ್ದರು.
ವಿಶ್ವಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಪದ್ಮನಾಭ ಬಂಟ್ವಾಳ, ವಿಶ್ಚ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ಸತೀಶ್ ,ಭಜರಂಗದಳ ಪುತ್ತೂರು ಜಿಲ್ಲಾ ಸಹಸಂಚಾಲಕರಾದ ಭರತ್ ಕುಮ್ಡೇಲು, ಗುರುರಾಜ್ ಬಂಟ್ವಾಳ, ಭಜರಂಗದಳ ಬಂಟ್ವಾಳ ಪ್ರಖಂಡದ ಸಂಚಾಲಕ ಶಿವಪ್ರಸಾದ್ ತುಂಬೆ, ಗೋರಕ್ಷ ಪ್ರಮುಖ್ ಅಭಿನ್ ರೈ, ಪ್ರಖಂಡದ ಸಹಸಂಚಾಲಕ ಸಂತೋಷ್ ಕುಲಾಲ್, ದೀಪಕ್ ಬಂಟ್ವಾಳ, ಸೇವಾ ಪ್ರಮುಖ್ ಪ್ರಸಾದ್ ಬೆಂಜನಪದವು , ವಿನಿತ್ ತುಂಬೆ , ಮೋಹನ್ ದಾಸ್ ಪಂಜಿಕಲ್ಲು, ರೋಹಿತ್ ಪೊಡಿಕಲ ವೇದಿಕೆಯಲ್ಲಿದ್ದರು.ವಿಶ್ವಹಿಂದೂ ಪರಿಷತ್ ತಾಲೂಕು ಕಾರ್ಯದರ್ಶಿ ಸುರೇಶ್ ಬೆಂಜನಪದವು ವರ್ಷದ ಕಾರ್ಯಚಟುವಟಿಕೆಗಳ ವರದಿ ವಾಚಿಸಿದರು.ಜಿಲ್ಲಾ ಗೋರಕ್ಷ ಪ್ರಮುಖ್ ಆಶೋಕ್ ಶೆಟ್ಟಿ ಸ್ವಾಗತಿಸಿದರು.ಕಾರ್ಯಕ್ರಮ ಆಯೋಜನೆಗೆ ಉಚಿತವಾಗಿ ಸ್ಥಳದ ಅವಕಾಶ ನೀಡಿದ ಸ್ಪರ್ಶಾ ಕಲಾಮಂದಿರದ ಮಾಲಕ ಸುಭಾಶ್ಚಂದ್ರ ಜೈನ್ ಅವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.
