ಬಂಟ್ವಾಳ:ಗಾಂಧಿ ಜಯಂತಿ ಪ್ರಯುಕ್ತ ರೋಟರಿ ಕ್ಲಬ್ ಬಂಟ್ವಾಳ್ ಟೌನ್ ಇದರ ಅನ್ಸ್ ಕ್ಲಬ್ಬಿನ ವತಿಯಿಂದ ಬಂಟ್ವಾಳ ಪುರಸಭೆಯ 13 ಮಂದಿ ಪೌರಕಾರ್ಮಿಕರನ್ನು ಅಭಿನಂದಿಸಲಾಯಿತು. ಬಿ.ಸಿ.ರೋಡಿನ ರೋಟರಿ ಸಾಧನ ಹಾಲ್ ನಲ್ಲಿ ಅನ್ಸ್ ಕ್ಲಬ್ಬಿನ ಅಧ್ಯಕ್ಷೆ , ರೊ. ಸವಿತಾ ಚಿತ್ತರಂಜನ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪೌರಕಾರ್ಮಿಕರನ್ನು ಅಭಿನಂದಿಸಲಾಯಿತು. 
ರೋಟರಿ ಕ್ಲಬ್ ಬಂಟ್ವಾಳ ಟೌನ್ ನ ಅಧ್ಯಕ್ಷ ರೋ ಪಿ . ಎಚ್. ಎಫ್. ಪದ್ಮನಾಭ ರೈ, ಕಾರ್ಯದರ್ಶಿ ಕಿಶೋರ್, ಉಪಾಧ್ಯಕ್ಷ ಜಗನ್ನಾಥ್ ಚೌಟ, ಅನ್ಸ್ ಕಾರ್ಯದರ್ಶಿ ಸುಪ್ರಿಯಾ ರಮೇಶ್, ಜತೆ ಕಾರ್ಯದರ್ಶಿ ಜಶ್ಮಿ ಕಿಶೋರ್, ಸುಜಾತ ಪಿ ರೈ, ರೊ. ಅಶಾಮಣಿ ಡಿ ರೈ, ಮಂಜುಳಾ ಶಾಂತರಾಜ್, ಸುಂದರ್ ಬಂಗೇರ, ರಮೇಶ್ ನೆಟ್ಲ, ಸುದೀರ್ ಶೆಟ್ಟಿ, ನಾರಾಯಣ ಸಿ ಪೆರ್ಣೆ, ರೊ. ಪಿ. ಎಚ್. ಎಫ್. ಸತೀಶ್, ಜ್ಯೋತಿಂದ್ರ ಶೆಟ್ಟಿ, ಉಮೇಶ್ ನೆಲ್ಲಿಗುಡ್ಡೆ, ಕೇಶವ ನಾಯ್ಕ್, ದಿವಾಕರ ಶೆಟ್ಟಿ, ಗಣೇಶ್ ಶೆಟ್ಟಿ, ನಾಗೇಶ್ ಕುಲಾಲ್, ಚಿತ್ತರಂಜನ್ ಶೆಟ್ಟಿ, ರೊ. ಪಿ. ಎಚ್. ಎಫ್. ಶಾಂತರಾಜ್, ವಿಕಾಸ್ ಶಾಂತರಾಜ್, ಪುರಸಭಾ ಸಿಬ್ಬಂದಿ ಮೊಹಮ್ಮದ್ ಇಕ್ಬಾಲ್ ಹಾಜರಿದ್ದರು.
