ದಾವಣಗೆರೆ:ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹೊಸಕಂಪ ಗ್ರಾಮ, ಇಲ್ಲಿಯ ನಿವಾಸಿಯಾದ ಮಹೇಶಪ್ಪ ಹಳಳ್ಳಿ (60 ವ) ತಂದೆ ಭೀಮಪ್ಪ. ಇವರು ಕಳೆದ ಮೂರು ವರ್ಷಗಳಿಂದ ಮನೆಯಿಂದ ಕಾಣೆಯಾಗಿದ್ದಾರೆ. ಅವರು ಏಲ್ಲಿ ಇದ್ದಾರೆ ಏನ್ನುವ ಮಾಹಿತಿ ತಿಳಿದುಬಂದಿಲ್ಲ. ಮನೆಯವರು- ಸಂಬಂಧಿಕರು ಇವರ ಹುಡುಕಾಟದಲ್ಲಿ ಇದ್ದಾರೆ. ಕುಟುಂಬಿಕರು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಜನ ಸಂಪರ್ಕ ಕಛೇರಿಗೆ ಬಂದು ಅಳಲನ್ನು ಹೇಳಿಕೊಂಡಿದ್ದಾರೆ.
ಸಾರ್ವಜನಿಕರು ಮಹೇಶಪ್ಪ ಹಳಳ್ಳಿ ಅವರ ಇರುವಿಕೆಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ (ರಿ) ಇದರ ನಾಗರಿಕ ಸಹಾಯವಾಣಿ 91649 01111 ಸಂಖ್ಯೆಗೆ ಮಾಹಿತಿ ನೀಡುವಂತೆ ಸಾರ್ವಜನಿಕ ಬಂಧುಗಳಲ್ಲಿ ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು, ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು ಅವರು ತಿಳಿಸಿದ್ದಾರೆ.
