ಕೈಕಂಬ : ನೀರುಮಾರ್ಗದ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ(ನೀರುಮಾರ್ಗ) ಮಹಾಶಕ್ತಿ ಕೇಂದ್ರದ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಸೆ. 28ರಂದು ನಡೆಯಿತು.ಸಂಪನ್ಮೂಲ ವ್ಯಕ್ತಿ ಬಿಜೆಪಿ ದಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ ಪಕ್ಷ ಸಂಘಟನೆ, ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಕಾರ್ಯಕರ್ತರ ಜವಾಬ್ದಾರಿ ಕುರಿತು ಮಾಹಿತಿ ನೀಡಿದರು. ಆರೆಸ್ಸೆಸ್ ಸಹ ಕಾರ್ಯಪ್ರಮುಖ್ ಭರತ್‍ರಾಜ್ ಅವಧಿಯಲ್ಲಿ ಸಂಘ ಮತ್ತು ಬಿಜೆಪಿ ಕಾರ್ಯಕರ್ತರ ಸಂಬಂಧ, ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾರ ಸೇವಾ ಕಾರ್ಯಗಳ ಬಗ್ಗೆ ವಿವರಿಸಲಾಯಿತು.gur-sep-29-nirumarga bjp

ಬಿಜೆಪಿ ನಗರ ಉತ್ತರ ಮಂಡಲ ಅಧ್ಯಕ್ಷ ತಿಲಕ್‍ರಾಜ್ ಕೃಷ್ಣಾಪುರ ಮಾತನಾಡಿದರು. ನೀರುಮಾರ್ಗ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಬಿಜೆಪಿ ಪಕ್ಷದ ವಿವಿಧ ಸಂಘಟನೆಗಳ ನೂತನ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ರಾಜೀವ ಶೆಟ್ಟಿ ಸಲ್ಲಾಜೆ, ಉತ್ತರ ಮಂಡಲ ಉಪಾಧ್ಯಕ್ಷ ಲಕ್ಷ್ಮಣ ಶೆಟ್ಟಿಗಾರ ಗುರುಪುರ, ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಕೊಟ್ಟಾರಿ ಮತ್ತು ಸಂದೀಪ್ ಪಚ್ಚನಾಡಿ, ಉತ್ತರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಭರತ್‍ರಾಜ್ ಕೃಷ್ಣಾಪುರ, ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ್ ಆಳ್ವ ಮಲ್ಲೂರು, ಉದ್ಯಮಿ ಮೋಹನದಾಸ ಶೆಟ್ಟಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಚಿನ್ ಹೆಗ್ಡೆ, ಪ್ರ. ಕಾರ್ಯದರ್ಶಿ ದಿನೇಶ್ ತಲ್ಲಿಮಾರು, ಮಂಡಲ ಎಸ್‍ಸಿ ಮೋರ್ಚಾ ಉಪಾಧ್ಯಕ್ಷ ತಿಮ್ಮಪ್ಪ ಎಸ್ ಕೊಂಬೆಲ್ ಮತ್ತಿತರರು ಉಪಸ್ಥಿತರಿದ್ದರು. ಉತ್ತರ ಮಂಡಲ ಕಾರ್ಯಕಾರಿಣಿ ಸದಸ್ಯ ಗೋಕುಲದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *