ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವಿಟ್ಲ ತಾಲೂಕು ವಿಟ್ಲ ವಲಯದ ನೀರ್ಕಜೆ ಒಕ್ಕೂಟದ ಆಶ್ರಯದಲ್ಲಿ ನರ್ಸರಿ ರಚನೆಯ ತರಬೇತಿ ಕಾರ್ಯಕ್ರಮ ನಡೆಯಿತು. ವಿಟ್ಲ ಚಂದಳಿಕೆಯ ಗಿರಿನಿವಾಸ ನರ್ಸರಿಯ ಚಂದ್ರಶೇಖರ ತರಬೇತಿ ನೀಡಿದರು. ಯೋಜನಾಧಿಕಾರಿ ಮೋಹನ್ ಕಾರ್ಯಕ್ರಮ ಉದ್ಘಾಟಿಸಿದರು.
ಅಡ್ಯನಡ್ಕ ಒಕ್ಕೂಟದ ಸೇವಾ ಪ್ರತಿನಿಧಿ ರೂಪಾ, ಅಧ್ಯಕ್ಷ, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ವಿಟ್ಲ ವಲಯ ಮೇಲ್ವಿಚಾರಕ ರಮೇಶ್ ಕೆ ಸ್ವಾಗತಿಸಿದರು. ನೀರ್ಕಜೆ ಒಕ್ಕೂಟದ ಸೇವಾ ಪ್ರತಿನಿಧಿ ವಂದಿಸಿದರು. ಕೃಷಿ ಮೇಲ್ವಿಚಾರಿ ನಂದಿತಾ ನಿರೂಪಿಸಿದರು.
