ಬಂಟ್ವಾಳ: ಪುರಸಭೆಗೆ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಬಂಟ್ವಾಳ ಬ್ಲಾಕ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ರಮಾನಾಥ ರೈಯವರ ನೇತೃತ್ವದಲ್ಲಿ ಶನಿವಾರ ಮನವಿ ಸಲ್ಲಿಸಲಾಯಿತು.
ಬಂಟ್ವಾಳ ಪುರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳನ್ನು ಕಡೆಗಣಿಸಲಾಗುತ್ತಿದ್ದು, ಚುನಾಯಿತ ಜನ ಪ್ರತಿನಿಧಿಗಳಿಗೆ ತಕ್ಷಣ ಅಧಿಕಾರವನ್ನು ಕೊಡಬೇಕು, ಸ್ಥಳಿಯ ಶಾಸಕರು ಪುರಸಭೆಯ ಕಾಂಗ್ರೆಸ್ ಸದಸ್ಯರ ವಾರ್ಡನಲ್ಲಿ ಅಭಿವೃದ್ದಿ ಕಾರ್ಯಕ್ಕೆ ಅನುದಾನ ಮೀಸಲಿಡದೆ ಕಡೆಗಣಿಸಿದ್ದಾರೆ. ನಿರ್ಮಲ ಬಂಟ್ವಾಳ ಯೋಜನೆಯಡಿ ತ್ಯಾಜ್ಯ ನಿರ್ವಹಣೆ ಸಂಪೂರ್ಣ ಸ್ಥಗಿತ ಗೊಂಡಿದೆ ಹಾಗೂ ಕುಡಿಯುವ ನೀರು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಪುರಸಭೆಯ ಅವ್ಯವಸ್ಥೆಯಿಂದ ೨ ತಿಂಗಳ ಕುಡಿಯುವ ನೀರಿನ ಬಿಲ್ಲು ೨ ಸಾವಿರದಿಂದ ೩ ಸಾವಿರಕ್ಕೆ ಏರಿಕೆಯಾಗಿದ್ದು, ಸಾರ್ವಜನಿಕರಿಗೆ ತುಂಬಲಾರದ ಹೊರೆಯಾಗಿದೆ ಎಂದು ಮನವಿಯಲ್ಲಿ ಆರೋಪಿಸಿ ಪುರಸಭೆಯ ಆಡಳಿತ ಅದಿಕಾರಿಯವರಿಗೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸುಧೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದ್ಯಸರಾದ ಚಂದ್ರಪ್ರಕಾಶ್ ಶೆಟ್ಟಿ, ಎಮ್. ಎಸ್ ಮಹಮ್ಮದ್, ತಾಲೂಕ್ ಪಂಚಾಯತ್ ಉಪಾಧ್ಯಕ್ಷರದ ಅಬ್ಬಾಸ್ ಆಲಿ, ಪುರಸಭಾ ಸದಸ್ಯರಾದ ವಾಸು ಪುಜಾರಿ ಲೊರೆಟ್ಟೊ, ಗಂಗಾಧರ ಪೂಜಾರಿ, ಲೋಲಾಕ್ಷ ಶೆಟ್ಟಿ, ಮೊಹಮ್ಮದ್ ನಂದರಬೆಟ್ಟು, ಜೆಸಿಂತಾ ಡಿ,ಸೋಜ, ಗಾಯತ್ರಿ ಪ್ರಕಾಶ್, ಲುಕ್ಮಾನ್, ಮಹಮ್ಮದ್ ಶರಿಫ್, ಅಬೂಬಕ್ಕರ್ ಸಿಧ್ದೀಕ್.ಪಕ್ಷದ ಮುಖಂಡರಾದ ಜಗದೀಶ್ ಕೊಯಿಲ, ಪದ್ಮನಾಭ ರೈ, ಚಿತ್ತರಂಜನ್ ಶೆಟ್ಟಿ, ಮದುಸೂಧನ್ ಶೆಣೈ, ಪದ್ಮಸ್ಮಿತ್, ಅಮ್ಮು ಅರಬಿಗುಡ್ಡೆ, ವೆಂಕಪ್ಪ ಪೂಜಾರಿ ಬಂಟ್ವಾಳ, ರಪೀಕ್ ಪಲ್ಲಮಜಲು, ವಿನೋದ್‌ರಾಜ್ ಕೊಯಿಲ ಉಪಸ್ಥಿತರಿದ್ದರು.
