ಬಂಟ್ವಾಲ: ವಿಜಯಬ್ಯಾಂಕ್ ಬರೋಡಾ ಬ್ಯಾಂಕಿನೊಂದಿಗೆ ವಿಲೀನಗೊಂಡ ಬಳಿಕ ಉಂಟಾದ ಅವ್ಯವಸ್ಥೆಯಿಂದ ಜನರ ಸಂಕಷ್ಟಕ್ಕೆಒಳಗಾದ ಹಿನ್ನಲೆಯಲ್ಲಿ ಕೆಲಗ್ರಾಹಕರ ದೂರಿಗೆ ಸ್ಪಂದಿಸಿದ  ಮಾಜಿ ಸಚಿವರಾದ  ಬಿ ರಮಾನಾಥ ರೈ ಅವರು ಬಿ.ಸಿ.ರೋಡಿನ ವಿಜಯಬ್ಯಾಂಕ್ ಶಾಖೆಗೆ ತೆರಳಿ ಬ್ಯಾಂಕ್ ವ್ಯವಸ್ಥಾಪಕರ ಜೊತೆ ಸಮಸ್ಯೆಯ ಬಗ್ಗೆ ಚರ್ಚಿಸಿದರು.
IMG-20200914-WA0071
ವಿಜಯ ಬ್ಯಾಂಕ್ ನ್ನು ಬರೋಡಾ ಬ್ಯಾಂಕಿನ ಜೊತೆ ವಿಲೀನ ಮಾಡಿದ ಪರಿಣಾಮವಾಗಿ ವಿಜಯ ಬ್ಯಾಂಕಿನ ಗ್ರಾಹಕರನ್ನು ಕೇಳುವವರಿಲ್ಲದಂತಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ಮಹಾಮಾರಿ ಕೊರೋನದ ಸಮಯದಲ್ಲಿಯಂತು ಬ್ಯಾಂಕಿನ ಅವ್ಯವಸ್ಥೆಯಿಂದಾಗಿ ಗ್ರಾಹಕರು ನೊಂದಿದ್ದಾರೆ.ಬ್ಯಾಂಕ್ ಗಳ ವಿಲೀನದಿಂದಾಗಿ ಗ್ರಾಹಕರ ಖಾತೆ ಸಂಖ್ಯೆ ಬದಲಾವಣೆ ಮತ್ತಿತರ ಸಮಸ್ಯೆಯಿಂದಾಗಿ  ಸೋಮವಾರವು ವಿಜಯಬ್ಯಾಂಕ್ ನ  ಗ್ರಾಹಕರು ಬ್ಯಾಂಕ್ ಮುಂದೆ ಜಮಾಯಿಸಿದ್ದರು.ಕೆಲ ಗ್ರಾಹಕರು ನೀಡಿದ ದೂರಿನ ಹಿನ್ನಲೆಯಲ್ಲಿ ಮಾಜಿ ಸಚಿವರಾದ  ಬಿ.ರಮಾನಾಥ ರೈ ಯವರು ಸ್ಥಳಕ್ಕೆ ಅಗಮಿಸಿ ಬ್ಯಾಂಕಿನ ಶಾಖಾ  ವ್ಯವಸ್ಥಾಪಕರೊಂದಿಗೆ ಮಾತುಕತೆ ನಡೆಸಿ ಬ್ಯಾಂಕಿನ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರಲ್ಲದೆ ನೆರೆದಿದ್ದ ಗ್ರಾಹಕರನ್ನು ಸಮಾಧಾನ ಪಡಿಸಿದರು.ಈ ಸಂದರ್ಭ ಬ್ಯಾಂಕಿನ ನಿವೃತ್ತ ಅಧಿಕಾರಿ ಬೇಬಿಕುಂದರ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *