ಬಂಟ್ವಾಳ: ಮಾಜಿ ರಾಷ್ಟ್ರಪತಿ ದಿವಂಗತ ಡಾ.ಪ್ತಣವ್ ಮುಖರ್ಜಿ ಅವರ ಸವಿನೆನಪಿಗಾಗಿ ಬಂಟ್ವಾಳ ಸಮೀಪದ ಲೊರೆಟ್ಟೋಪದವಿನ ಯುವಫ್ರೆಂಡ್ಸ್ ಕ್ಲಬ್ ವತಿಯಿಂದ ಲೊರೊಟ್ಟೋಪದವಿನಲ್ಲಿ ನಿರ್ಮಿಸಿ ಕೊಡುಗೆಯಾಗಿ ನೀಡಿದ ಬಸ್ ತಂಗುದಾಣವನ್ನು ಲೋಕಾರ್ಪಣೆ ಗೊಳಿಸಲಾಯಿತು.
ಸ್ಥಳೀಯ ಹಿರಿಯರಾದ ತೆರೇಸಾ ಡಿಸೋಜ ಅವರು ಬಸ್ ತಂಗುದಾಣವನ್ನು ಉದ್ಘಾಟಿಸಿ,ಸಾರ್ವಜನಿಕರು ತಂಗುದಾಣವನ್ನು ಶುಚಿತ್ವದಲ್ಲಿರಿಸಿಕೊಂಡು ಇದರ ಸದುಪಯೋಗಪಡೆಯುವಂತೆ ಮನವಿ ಮಾಡಿದರು.ಪುರಸಭೆಯ ಸ್ಥಳೀಯ ಸದಸ್ಯ ವಾಸುಪೂಜಾರಿ,ಯುವಫ್ರೆಂಡ್ಸ್ ನ ಸಂಚಾಲಕ ಜಗದೀಶ್ ಪೂಜಾರಿ,ಹರೀಶ್ ದೇವಾಡಿಗ,ರೋನಾಲ್ಡ್,ರಾಜೇಶ್ ,ಚಂದ್ರ, ಕಾರ್ಡಿಯಾಂ ಬಾರೆಕಾಡ್,ಮಥಾಯಿಸ್ ಲೋಬೋ,ನಾಗೇಶ್ ಕೋಟೆಬೈಲು ಮೊದಲಾದವರಿದ್ದರು
