ಬಂಟ್ವಾಳ: ಮಹಾಮಾರಿ ಕೋರೋನವನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಆರೋಗ್ಯ ಇಲಾಖೆಯಲ್ಲಿ ನಮಿತಾ ಹಾಗೂ ಆಶಾ ಕಾರ್ಯಕರ್ತರಾದ ಶೋಭಾ, ಹೇಮಲತಾ, ಜ್ಯೋತಿಲಕ್ಷ್ಮೀ ಇವರನ್ನು ಯುವಸಂಗಮ ಮೆಲ್ಕಾರ್ ವತಿಯಿಂದ ಸನ್ಮಾನಿಸಲಾಯಿತು.
ನಿವೃತ್ತ ಭೂಸೇನಾ ಯೋಧರಾದ ಸತೀಶ್ ಸುವರ್ಣ, ಯುವ ಸಂಗಮದ ಅಧ್ಯಕ್ಷ ಓಂಪ್ರಕಾಶ್ , ಪ್ರಧಾನ ಕಾರ್ಯದರ್ಶಿ ಹರೀಶ್ ಶೆಣೈ, ಕೋಶಾಧಿಕಾರಿ ರಾಜೇಶ್ ನಾಯಕ್, ಪುರಸಭೆ ಸದಸ್ಯೆಯಾದ ಜೆಸಿಂತಾ ಡಿಸೋಜ ,ಅಂಗನವಾಡಿ ಟೀಚರ್ ವಸಂತಿ ಗಂಗಾಧರ್, ರವಳನಾಥ್ ನಾಯಕ್, ಎಂ.ಎನ್ ಕುಮಾರ್, ಕೃಷ್ಣ ನಾಯ್ಕ , ಪ್ರಸಾದ್ , ಪ್ರವೀಣ್ ಮೆಲ್ಕಾರ್, ಕರುಣಾಕರ್, ಕಿಶೋರ್ ಕುದ್ಮುಲ್, ವಿಠಲ್ ಶೆಣೈ, ಗಣೇಶ್ ಶೆಣೈ, ದಿನೇಶ್ ಟೈಲರ್ ಭಾಗವಹಿಸಿದ್ದರು. ಶಂಕರ ಆಚಾರ್ಯ ರವರು ಕಾರ್ಯಕ್ರಮ ಸಂಯೋಜಿಸಿದರು.
