ಬಂಟ್ವಾಳ: ಬಿ.ಮೂಡ ಗ್ರಾಮದ ಕೈಕಂಬದ ಪರ್ಲಿಯಾ ಎಂಬಲ್ಲಿನ ಮನೆಯೊಂದರಲ್ಲಿ  ಗಾಂಜಾ ದಾಸ್ತನಿಟ್ಟಿರುವುದನ್ನು ಬಂಟ್ವಾಳ ನಗರ ಪೊಲೀಸರು ಮಂಗಳವಾರ ಸಂಜೆ ದಾಳಿ ನಡೆಸಿ ಪತ್ತೆಹಚ್ಚಿದ್ದಾರೆ.  ಈ ಸಂಬಂಧವಾಗಿ ಪರ್ಲಿಯಾ ಮದ್ದ ನಿವಾಸಿ ಅಹಮದ್ ಸಾಬೀತ್ (30) ಎಂಬಾತನನ್ನು ಬಂಧಿಸಿದ್ದಾರೆ.IMG-20200908-WA0107

ಈತನಿಂದ 40 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮತ್ತೋರ್ವ ಆರೋಪಿ ಮಹಮ್ಮದ್ ಅನ್ಸಾರ್‌ ಎಂಬಾತ ಪರಾರಿಯಾಗಿದ್ದಾನೆ. ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ  ಈ ದಾಳಿ ಕಾರ್ಯಾಚರಣೆ ನಡೆದಿದೆ.

ಈ ವೇಳೆ ಮನೆಯ ಶೌಚಾಲಯದ ಮೇಲ್ಬಾಗದಲ್ಲಿದ್ದ ಗೋಣಿ ಚೀಲಗಳನ್ನು ಪರಿಶೀಲಿಸಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿದೆ. ಸುಮಾರು 40 ಕೆಜಿಯಷ್ಟು ಗಾಂಜಾ ದಾಸ್ತಾನು ದೊರೆತಿದ್ದು,. ಇದರ ಒಟ್ಟು ಮೌಲ್ಯ ರೂ.19,97,400 ಎಂದು ಅಂದಾಜಿಸಲಾಗಿದೆ.  ಸಿಐ ಸಿ.ಡಿ.ನಾಗರಾಜ್ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಎಸೈ ಅವಿನಾಶ್ ಮತ್ತವರ ಸಿಬ್ಬಂದಿಗಳು ಈ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.

By suddi9

Leave a Reply

Your email address will not be published. Required fields are marked *