ಬಂಟ್ವಾಳ: ಕಳ್ಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ50 ಸಾ.ರೂ.ವೆಚ್ಚ ಅನುದಾನದಲ್ಲಿ ಅಳವಡಿಸಲಾದ ಸೋಲಾರ್ ಹೈಮಾಸ್ ದೀಪವನ್ನು ಮಾಜಿಸಚಿವ ಬಿ.ರಮಾನಾಥ ರೈ ಅವರು ಉದ್ಘಾಟಿಸಿದರು. ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ ಶಿವಪ್ರಸಾದ್ ಕನಪಾಡಿ ಯವರ ತಾಲೂಕು ಪಂಚಾಯತ್ ನ ಅಭಿವೃದ್ಧಿ ಯೋಜನೆಯಡಿಯಲ್ಲಿ ಹೈಮಾಸ್ ದೀಪವನ್ನುಅನುಷ್ಠಾನಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಮಧುಸೂದಕರ್ ಶೆಣೈ, ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿಯ ಸಂಚಾಲಕರಾದ ನಾರಾಯಣ ನಾಯ್ಕ,ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಉಮೇಶ್ ರೆಂಜೋಡಿ ಸ್ವಾಗತಿಸಿ, ಸುಕುಮಾರ್ ಗುಂಡಿಬೆಟ್ಟು ವಂದಿಸಿದರು.
