ಬಂಟ್ವಾಳ: ಶಾಲೆಯ ಏಳಿಗೆಯಲ್ಲಿ ಸಹಶಿಕ್ಷಕರ ಪಾತ್ರ ಮಹತ್ವದಾಗಿದ್ದು, ಅವರನ್ನು ಗುರುತಿಸಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿದಾಗ ಅವರಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ವೀರಕಂಬ ಮಜಿ ದ.ಕ.ಜಿ.ಪ.ಹಿ.ಪ್ರಾ.ಶಾಲೆಯ ಮುಖ್ಯಶಿ ಕ್ಷಕ ನಾರಾಯಣ ಪೂಜಾರಿ ಹೇಳಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶಾಲಾ ಸಹಶಿಕ್ಷಕಿ ಸಂಗೀತ ಶಮ೯ಪಿ.ಜಿ.ಇವರನ್ನು ಶಾಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದ ಪರವಾಗಿ ಅಭಿನಂದಿಸಿ ಮಾತನಾಡಿದರು.

ಸಹ ಶಿಕ್ಷಕಿ ಶಕುಂತಳಾ,ಶಿಕ್ಷಕ ಅನುಷ ಶೆಟ್ಟಿ ರವರು ತಮ್ಮ ಈ ಹಿಂದಿನ ಶಾಲೆಯಲ್ಲೂ ಶಿಕ್ಷಕಿ ಶ್ರೀಮತಿ ಸಂಗೀತ ಶರ್ಮಾ ಜೊತೆಯಲ್ಲಿ ಕತ೯ವ್ಯ ನಿವ೯ಹಿಸಿದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.ಯಾವುದೇ ಸಾಧನೆಗಳು ಒಬ್ಬ ವ್ಯಕ್ತಿ ಯಿಂದ ಮಾತ್ರ ಸಾಧಿಸಲು ಸಾಧ್ಯವಿಲ್ಲ ಅದರ ಹಿಂದೆ ಹಲವರ ಶ್ರಮ ಬೆಂಬಲ ಗಳು ಇರಬೇಕಾಗುತ್ತದೆ ಈ ಪ್ರಶಸ್ತಿ ಯು ನನ್ನ ಹೆಸರಿಗಷ್ಟೇ ಬಂದಿರಬಹುದು ಆದರೆ ಎಲ್ಲರ ಮಾಗ೯ದಶ೯ನ,ಸಹಕಾರದಿಂದ ಸಾಧ್ಯವಾಗಿದೆ ಎಂದು ಅಭಿನಂದನೆ ಸ್ವೀಕರಿಸಿ ಸಂಗೀತ ಶಮ೯ರವರು ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು ಕಾಯ೯ಕ್ರಮದಲ್ಲಿ ಶಿಕ್ಷಕರು , ಗೌರವ ಶಿಕ್ಷಕಿಯರು ,ಅಡುಗೆ ಸಿಬ್ಬಂದಿ ಯವರು ಹಾಜರಿದ್ದರು, ಗೌರವ ಶಿಕ್ಷಕಿ ಜಯಲಕ್ಷ್ಮೀ ಸ್ವಾಗತಿಸಿ ಕಾಯ೯ಕ್ರಮ ನಿರೂಪಿಸಿದರು.
