ಪೊಳಲಿ: ಬಿ.ಜೆ.ಪಿ ಸಜಿಪಮುನ್ನೂರು ಮಹಾಶಕ್ತಿ ಕೇಂದ್ರ ಮತ್ತು ಬಿ.ಜೆ.ಪಿ ಯುವ ಮೋರ್ಚಾ ವತಿಯಿಂದ ಕರಿಯಂಗಳ ಗ್ರಾಮದಲ್ಲಿ ಪ್ರಧಾನಿಮಂತ್ರಿ ನರೇಂದ್ರ ಮೋದಿರವರ ಮಹತ್ವಾಕಾಂಕ್ಷೆಯ ಯೋಜನೆ ಆಯುಷ್ಮಾನ್ ಭಾರತ್ ನೊಂದಣಿ ಮತ್ತು ಆಯುಷ್ಮಾನ್ ಕಾರ್ಡ್ ಅಭಿಯಾನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂ.ಸದಸ್ಯರಾದ ಯಶವಂತ ಪೊಳಲಿ, ಮಾಜಿ ಗ್ರಾಮ ಪಂ.ಅಧ್ಯಕ್ಷರಾದ ಚಂದ್ರಾವತಿ, ಬಿ.ಜೆ.ಪಿ ಪ್ರಮುಖರಾದ ವೆಂಕಟೇಶ್ ನಾವಡ, ಸುಕೇಶ್ ಚೌಟ, ಲೋಕೇಶ್ ಭರಣಿ, ಕಿಶೋರ್ ಪಲ್ಲಿಪಾಡಿ, ಕಾರ್ತಿಕ್ ಬಳ್ಳಾಲ್ ಮತ್ತು ಸ್ಥಳಿಯರು ಉಪಸ್ಥಿತರಿದ್ದರು.
