ಬಂಟ್ವಾಳ :ತಾಲೂಕಿನ ಅಮ್ಮುಂಜೆ ಗ್ರಾಮದ ಮಾದ್ ಕೋಡಿ ಎಂಬಲ್ಲಿ ಜನಾರ್ಧನ್ (೩೮) ಇವರ ಮೇಲೆ ಸಿಮೆಂಟ್ ಇಟ್ಟಿಗೆಯ ಗೋಡೆಯು ಕುಸಿದು ಬಿದ್ದುದರಿಂದ ಮೃತರಾಗಿದ್ದು, ಇನ್ನೊಬ್ಬರು ತೀವ್ರ ಗಾಯಗೊಂಡಿರುತ್ತಾರೆ.
ತೀವ್ರ ಗಾಯ ಗೊಂಡಿರುವವರನ್ನು ಮಂಗಳೂರಿನ ಪಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಮೃತ ಪಟ್ಟ ಯುವಕ ಶಂಭೂರು ನಿವಾಸಿ ಜನಾರ್ಧನ (38) ಭಾನುವಾರ ರಜೆಯಲ್ಲಿ ಮಾಧುಕೋಡಿ ಎಂಬಲ್ಲಿ ಶ್ರಮಾದಾನ ಮಾಡುವಾಗ ಘಟನೆ ನಡೆದಿದೆ . ಬಂಟ್ವಾಳ ಗ್ರಾಮಾಂತರ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರೀಶೀಲನೆ ನಡೆಸಿದ್ದಾರೆ.
